ಉತ್ತರ ಕರ್ನಾಟಕ ಹಿನ್ನೆಲೆಯ ಹಲವು ಧಾರಾವಾಹಿಗಳು ಇದುವರೆಗೂ ಕನ್ನಡದ ಬೇರೆ ಬೇರೆ ಚಾನಲ್‌ಗಳಲ್ಲಿ ಪ್ರಸಾರವಾಗಿವೆ. ಈಗ ಸುವರ್ಣ ಚಾನಲ್‌ನಲ್ಲಿ ಇನ್ನೊಂದು ಹೊಸ ಧಾರಾವಾಹಿ ಪ್ರಸಾರವಾಗುವುದಕ್ಕೆ ಸಜ್ಜಾಗಿದೆ. ಸಜ್ಜಾಗಿದೆಯೇನು, ಈಗಾಗಲೇ ನಿನ್ನೆ (ಸೋಮವಾರ)ಯಿಂದ ಪ್ರಸಾರ ಶುರುವಾಗಿದೆ. ಈ ಧಾರಾವಹಿ ಸೋಮವಾರದಿಂದ ಶುಕ್ರವಾರದವರೆಗೂ ಸಂಜೆ 6.30ಕ್ಕೆ ಪ್ರಸಾರವಾಗಲಿದೆ.
“ಗುಂಡ್ಯಾನ ಮದುವೆ’ ಎಂಬ ಹೆಸರೇ ಹೇಳುವಂತೆ, ಗುಂಡ್ಯಾ ಎಂಬ ಹುಡುಗನ ಸುತ್ತ ಸುತ್ತುತ್ತದೆ. ಶ್ರೀಮಂತ ದೇಸಾಯಿ ಕುಟುಂಬದ ಗುಂಡ್ಯಾ ಓದಿನಲ್ಲಿ ಬಹಳ ಹಿಂದಿರುವಾತ ಎಸ್.ಎಸ್.ಎಲ್.ಸಿಯಲ್ಲಿ ನಾಲ್ಕು ಬಾರಿ ಫೇಲ್ ಆಗುವ ಗುಂಡ್ಯಾನ ಮನೆಗೆ ಕಮಲಿ ಎಂಬಾಕೆ ಬರುತ್ತಾಳೆ. ಅವರು ಬರುವುದು ಯಾಕೆ ಮತ್ತು ಅವಳ ಆಗಮನದಿಂದು ಗುಂಡ್ಯಾನ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದು ಈ ಧಾರಾವಾಹಿಯ ಕಥೆ. ಪಕ್ಕಾ ಉತ್ತರ ಕರ್ನಾಟಕದ ಭಾಷೆಯಿರುವ “ಗುಂಡ್ಯನ ಹೆಂಡತಿ’ ಧಾರಾವಾಹಿಗೆ ಕಥೆ ಬರೆದಿರುವುದು ನಂದಿನಿ ಯಾದವ್. ಅಂಜುಮ್ ರಿಜ್ವಿ ಈ ಧಾರಾವಾಹಿಯ ನಿರ್ಮಾಪಕರು. ಸಮೀಪ್, ಸುದೀಪನಾ ಪ್ರಭುದೇವ್, ರಮೇಶ್ ಪಂಡಿತ್, ಸುಂದರಶ್ರೀ, ಶಶಿಕುಮಾರ್, ಸುಷ್ಮಾ ನಾಣಯ್ಯ, ಬಸವರಾಜ ತಿರ್ಲಾಪುರ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ.
-ಉದಯವಾಣಿ