ಮನೋರಂಜನೆ

‘ನೀರ್ಜಾ’ ಮೊದಲ ದಿನದ ಗಳಿಕೆ 4.7ಕೋಟಿ

Pinterest LinkedIn Tumblr

Sonam-Kapoor-in-Neerja-movie

ಮುಂಬೈ: ಅಪಹರಣಗೊಂಡ ವಿಮಾನವೊಂದರೆ ಒತ್ತೆಯಾಳುಗಳನ್ನು ರಕ್ಷಿಸಲು ತನ್ನ ಪ್ರಾಣ ತೊರೆದ ನೀರಜಾ ಭಾನೋಟ್ ಅವರ ಬಯೋಪಿಕ್, ಸೋನಮ್ ಕಪೂರ್ ಅಭಿನಯಿಸಿರುವ ‘ನೀರ್ಜಾ’ ಸಿನೆಮಾದ ಗಳಿಕೆ ಮೊದಲ ದಿನವೇ 4 ಕೋಟಿಗಿಂತಲೂ ಹೆಚ್ಚಿದೆ.

ರಾಮ್ ಮಾಧ್ವಾನಿ ನಿರ್ದೇಶನದ ಸಿನೆಮಾ ಶುಕ್ರವಾರ ಬಿಡುಗಡೆಯಾಗಿದ್ದು, ಮೊದಲ ದಿನದ ಅಂತ್ಯದ ಗಳಿಕೆ 4.7 ಕೋಟಿ ಇದ್ದು, ಜನರ ಮಾತಿನ ನಡುವೆ ಜನಪ್ರಿಯವಾಗಿ ಮುನ್ನಡೆದಿದೆ ಎನ್ನಲಾಗಿದೆ.

“ಚಿತ್ರಮಂದಿರಗಳಲ್ಲಿ ಸಿಕ್ಕಿರುವ ಅದ್ಭುತ ಪ್ರತಿಕ್ರಿಯೆಯಿಂದ ನಾನು ವಿನೀತನಾಗಿದ್ದೇನೆ. ಒಳ್ಳೆಯ ವಿಷಯ ಇರುವ ಸಿನೆಮಾವನ್ನು ಜನ ಎದುರು ನೋಡುತ್ತಾರೆ ಎಂಬುದಕ್ಕೆ ಇದು ಉದಾಹರಣೆ” ಎಂದು ಸಿನೆಮಾದ ಸಹನಿರ್ಮಾಪಕ ಅತುಲ್ ಕಸ್ಬೇಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ನೀರ್ಜಾ’ ವಾರಾಂತ್ಯದಲ್ಲಿ ಇನ್ನೂ ಹೆಚ್ಚಿನ ಗಳಿಗೆ ಕಾಣಲಿದೆ ಎನ್ನುತಾರೆ ಸಿನೆಮಾ ಮಾರುಕಟ್ಟೆ ಪಂಡಿದ ತರಣ್ ಆದರ್ಶ್.

Write A Comment