ಮನೋರಂಜನೆ

ಪ್ರಸಾರ ಭಾರತಿ ಮಂಡಳಿ ಸದಸ್ಯೆಯಾಗಿ ನಟಿ ಕಾಜೋಲ್ ನೇಮಕ

Pinterest LinkedIn Tumblr

kajolನವದೆಹಲಿ: ಬಾಲಿವುಡ್ ನಟಿ ಕಾಜೋಲ್ ಅವರನ್ನು ಪ್ರಸಾರ ಭಾರತಿ ಮಂಡಳಿಯ ಅರೆಕಾಲಿಕ ಸದಸ್ಯೆಯಾಗಿ ನೇಮಕ ಮಾಡಲಾಗಿದೆ.

2021ರವರೆಗೂ ಕಾಜೋಲ್ ಅವರು ಕಾರ್ಯ ನಿರ್ವಹಿಸಲಿದ್ದಾರೆ ಹಾಗೂ ಫೆಬ್ರವರಿ 24ರಂದು ನಡೆಯಲಿರುವ ಪ್ರಸಾರ ಭಾರತಿಯ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಈ ಸಭೆಯಲ್ಲಿ ದೂರದರ್ಶನ ಮತ್ತು ಆಕಾಶವಾಣಿ ಮಹಾನಿರ್ದೇಶಕರ ನೇಮಕಾತಿ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪ್ರಸಾರ ಭಾರತಿ ನಿಯಮಾವಳಿ ಪ್ರಕಾರ ಆರು ಮಂದಿ ಅರೆಕಾಲಿಕ ಸದಸ್ಯರನ್ನು ನೇಮಕ ಮಾಡಿಕೊಳ್ಳುವ ಅವಕಾಶವಿದೆ. ಇದೇ ವೇಳೆ ಆನ್ ಲೈನ್ ಮೀಡಿಯಾ ಕಂಪನಿ ಮುಖ್ಯಸ್ಥರಾದ ಶಶಿಶೇಖರ್ ವೆಂಪತಿ ಅವರನ್ನು ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Write A Comment