ಕರ್ನಾಟಕ

ಷಟ್ಪಥ ಎಲಿವೇಟೆಡ್ ರಸ್ತೆ

Pinterest LinkedIn Tumblr

gergeಬೆಂಗಳೂರು: ಕೆ.ಆರ್.ಪುರದಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ 6 ಪಥಗಳ ಎಲಿವೇಟೆಡ್ ಕಾರಿಡಾರ್ ನಿರ್ವಣಕ್ಕಾಗಿ ಕ್ರಿಯಾಯೋಜನೆ ಸಿದ್ಧಪಡಿಸಲು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಸೂಚನೆ ನೀಡಿದ್ದಾರೆ.

ಮಾರತಹಳ್ಳಿ, ಹೆಬ್ಬಾಳ, ವೈಟ್​ಫೀಲ್ಡ್ ಹಾಗೂ ನಗರದ ಕೇಂದ್ರ ಭಾಗಕ್ಕೆ ಸಂರ್ಪಸುವ ಪ್ರದೇಶದಲ್ಲಿ ಕಾರಿಡಾರ್ ನಿರ್ವಿುಸುವ ಯೋಜನೆ ಇದಾಗಿದೆ. ಬೆನ್ನಿಗಾನಹಳ್ಳಿ ಕೆರೆ ಪ್ರದೇಶಕ್ಕೆ 5 ಪಿಲ್ಲರ್ ಹಾಕಿ ನಿರ್ವಿುಸಲಾಗುವ ಲೂಪ್​ನಲ್ಲಿ ವಾಹನಗಳು ಮೇಲ್ಸೇತುವೆಗೆ ಸಂರ್ಪಸುವಂತೆ ರ‍್ಯಾಂಪ್ ನಿರ್ವಿುಸಿ ನೇರವಾಗಿ ಕೆ.ಆರ್. ಪುರದ ಕೇಬಲ್ ಬ್ರಿಡ್ಜ್ ಬಳಿ ಬಂದು, ಬಲಕ್ಕೆ ತಿರುಗಿ ವೈಟ್​ಫೀಲ್ಡ್ ರಸ್ತೆಗೆ ಸೇರ್ಪಡೆಯಾಗುತ್ತದೆ.

ಕೆ.ಆರ್.ಪುರದ ತೂಗುಸೇತುವೆ ಮತ್ತಿತರ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿದ್ದ ಜಾರ್ಜ್, ಸ್ಥಳೀಯರ ಸಮಸ್ಯೆಗಳನ್ನ ಆಲಿಸಿ, 630 ಕೋಟಿ ರೂ. ವೆಚ್ಚದ 6 ಕಿ.ಮೀ. ಕಾರಿಡಾರ್ ನಿರ್ವಣಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಲು ಸೂಚಿಸಿದರು.

ರಸ್ತೆ ಅಗಲೀಕರಣ: ಬೈಯಪ್ಪನಹಳ್ಳಿಯಿಂದ ಎನ್​ಜಿಎಫ್ ಬಳಿ ಇರುವ ಕೆಎಸ್​ಆರ್​ಟಿಸಿ ನಿಲ್ದಾಣಕ್ಕೆ ಹೋಗುವ ರಸ್ತೆ ಕಿರಿದಾಗಿರುವ ಕಾರಣ, ಸಂಚಾರದಟ್ಟಣೆ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ರೂಪದಲ್ಲಿ ರಸ್ತೆ ಅಗಲೀಕರಣಗೊಳಿಸುವಂತೆ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರು ಮನವಿ ಮಾಡಿದ್ದರು. ನಮ್ಮ ಮೆಟ್ರೋ ಮೇಲ್ಸೇತುವೆ ಕೆಳಗಿನ ಜಾಗ ಯಾವ ಇಲಾಖೆಗೆ ಸೇರಿದೆ ಎಂಬುದನ್ನು ತಿಳಿದು, ರಸ್ತೆಯನ್ನು ಅಗಲೀಕರಣ ಮಾಡುವಂತೆ ಬಿಎಂಆರ್​ಸಿಎಲ್​ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಅವರಿಗೆ ಜಾರ್ಜ್ ನಿರ್ದೇಶನ ನೀಡಿದರು.

ಕೆ.ಆರ್.ಪುರದಿಂದ ಮಾರತ್ತಹಳ್ಳಿ ವೈಟ್​ಫೀಲ್ಡ್ ಕಡೆಗೆ ಹೋಗುವ ಸ್ಥಳೀಯರು ಸದ್ಯ ಟಿನ್ ಫ್ಯಾಕ್ಟರಿಗೆ ಬಂದು, ಸುತ್ತು ಹಾಕಬೇಕಿದೆ. ಈಗಾಗಲೇ ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಅಂಡರ್​ಪಾಸ್ ನಿರ್ವಿುಸಿದೆ. ಪಾಲಿಕೆ ವತಿಯಿಂದ ಕಾಂಕ್ರೀಟ್ ರಸ್ತೆಯ ನಿರ್ಮಾಣ ಕಾಮಗಾರಿ ಮಾರ್ಚ್ ವೇಳೆಗೆ ಮುಗಿಯಲಿದೆ. ಈ ರಸ್ತೆಯಿಂದ ಮಾರತ್ತಹಳ್ಳಿ ಹಾಗೂ ವೈಟ್​ಫೀಲ್ಡ್ ಕಡೆಗೆ ಹೋಗುವವರು ಟಿನ್​ಫ್ಯಾಕ್ಟರಿಗೆ ಬರುವುದು ತಪ್ಪುತ್ತದೆ ಎಂದು ಹೇಳಿದರು.

ತಂಗುದಾಣ ನಿರ್ಮಾಣ ಚರ್ಚೆ

ಕೆ.ಆರ್. ಪುರದ ಶಕ್ತಿ ದೇವಸ್ಥಾನ ಮತ್ತು ಟಿನ್ ಫ್ಯಾಕ್ಟರಿ ಬಳಿಯ ಬಸ್ ತಂಗುದಾಣ ನವೀಕರಣ ಸಂಬಂಧ ರ್ಚಚಿಸಲಾಯಿತು. ಒತ್ತುವರಿಯಾಗಿರುವ ನಿಲ್ದಾಣ ತೆರುವುಗೊಳಿಸಿಬೇಕೆಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್​ರೂಪ್ ಕೌರ್​ಗೆ ಜಾರ್ಜ್ ಸೂಚಿಸಿದರು.

ಸಿನಿಮಾ ನಟರು, ರಾಜಕಾರಣಿಗಳು ಮಾತ್ರವಲ್ಲದೆ ಜನಸಾಮಾನ್ಯರು ಫ್ಲೆಕ್ಸ್​ಗಳನ್ನು ಅಳವಡಿಸಿರುವುದು ನಗರದ ಸೌಂದರ್ಯಕ್ಕೆ ಕುತ್ತು ತಂದಿದೆ. ಪ್ಲಾಸ್ಟಿಕ್ ನಿಷೇಧದ ಬೆನ್ನಲ್ಲೇ ಫ್ಲೆಕ್ಸ್ ಹಾಗೂ ಬ್ಯಾನರ್​ಗಳನ್ನು ನಿಷೇಧಿಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು.

| ಕೆ.ಜೆ. ಜಾರ್ಜ್, ಬೆಂಗಳೂರು ನಗರಾಭಿವೃದ್ಧಿ ಸಚಿವ

Write A Comment