ಎಸ್. ರಮೇಶ್ ನಿರ್ಮಾಣದ ‘ರಣತಂತ್ರ’ ಚಿತ್ರದ ರೀಮೇಕ್ ಹಕ್ಕು ತೆಲುಗು ಮತ್ತು ತಮಿಳಿಗೆ ಮಾರಾಟವಾಗಿದೆ. ತೆಲುಗಿನಲ್ಲಿ ನಿರ್ಮಾಪಕ ಟಿ. ರಾಮ ಸತ್ಯನಾರಾಯಣ, ತಮಿಳಿನಲ್ಲಿ ಆದಿರಾಜ್ ರೀಮೇಕ್ ಹಕ್ಕು ಪಡೆದಿದ್ದಾರೆ.
ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ ಆದಿರಾಂ ಅವರದ್ದು. ರಾಜೇಶ್ ಯಾದವ್ ಛಾಯಾಗ್ರಹಣ, ಎಂ. ಕಾರ್ತಿಕ್ ಸಂಗೀತ, ಉಗ್ರಂ ಶೆಟ್ಟಿ ಸಂಕಲನ, ನಂಜುಂಡಸ್ವಾಮಿ ಕಲೆ ಚಿತ್ರಕ್ಕಿದೆ. ವಿಜಯ್ ರಾಘವೇಂದ್ರ, ಹರಿಪ್ರಿಯಾ, ಸತ್ಯಜಿತ್, ಮಾದು, ಐಶ್ವರ್ಯಾ, ಕುರಿ ರಂಗ, ಶಶಿಕಲಾ, ಸೋನಂ, ಭಾರತಿ, ಶೋಭಿನಾ, ಅ೦ಜಲಿ ಇತರರು ತಾರಾಗಣದಲ್ಲಿ ಇದ್ದಾರೆ.