ಅಂಬಾರಿಯಲ್ಲಿ ಅದ್ಧೂರಿ ಪ್ರೇಮ್ ಕಹಾನಿ ತೋರಿಸಿದ್ದ ನಿರ್ದೇಶಕ ಎ.ಪಿ ಅರ್ಜುನ್ ರಾಟೆ ಚಿತ್ರದ ಸೋಲು ಐರಾವತದ ಚಿತ್ರದ ಸಾಧಾರಣ ಯಶಸ್ಸು ಮರೆಯಲು ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.
ಪ್ರೇಮಿಗಳ ದಿನದಂದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರಿಂದ ತುಂಟ ತುಟಿಗಳ ಆಟೋಗ್ರಾಫ್ “ಕಿಸ್” ಚಿತ್ರದ ಫಸ್ಟ್ ಲುಕ್’ನ್ನು ಬಿಡುಗಡೆ ಮಾಡಿಸಿ ಹೊಸತೊಂದು ಲವ್ ಸ್ಟೋರಿಗೆ ಮುನ್ನುಡಿ ಇಟ್ಟಿದ್ದಾರೆ.
ವಿ.ರವಿಕುಮಾರ್ ನಿರ್ಮಿಸಲಿರುವ “ಕಿಸ್” ಚಿತ್ರದಲ್ಲಿ ನಾಯಕ ನಾಯಕಿ ಪಾತ್ರಕ್ಕೆ ಯುವ ಪ್ರತಿಭೆಗಳಿಗೆ ಮಣೆ ಹಾಕಲು ನಿರ್ದೇಶಕ ಎ.ಪಿ ಅರ್ಜುನ್ ನಿರ್ಧರಿಸಿದ್ದಾರೆ. ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಲಿದ್ದು ಇಮ್ರಾನ್ ಸರ್ದಾರಿಯಾ ಕೊರಿಯೊಗ್ರಾಫಿ ಮಾಡಲಿದ್ದಾರೆ.
ನೀವು ಸ್ಟಾರ್ ಆಗ್ಬೇಕೆ? ಮಾಡ್ಬೇಕಾಗಿರುವುದು ಇಷ್ಟೇ…ಕ್ಯೂಟ್ ಅಂಡ್ ಸ್ಟೈಲಿಸ್ಟ್ ಆಗಿರೋ ನಿಮ್ಮ ನಾಲ್ಕೈದು ಫೋಟೊಗಳನ್ನು aparjunkiss@gmail.com ಮೈಲ್ ಮಾಡಿ ಕಿಸ್ ಚಿತ್ರದಲ್ಲಿ ಕಿಸ್ಸರ್ಸ್ ಆಗೋ ಛಾನ್ಸ್ ಪಡೆಯಿರಿ.
★ಕಪ್ಪು ಮೂಗುತ್ತಿ
-ಉದಯವಾಣಿ