ಮನೋರಂಜನೆ

ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಬಲ ಸ್ಪರ್ಧಿ: ಧೋನಿ ವಿಶ್ವಾಸ

Pinterest LinkedIn Tumblr

dhoni1

ವಿಶಾಖಪಟ್ಟಣ: ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ವಿರುದ್ಧದ ಟಿ20 ಸರಣಿ ಗೆದ್ದ ಹುಮ್ಮಸ್ಸಿನಲ್ಲಿರುವ ಟೀಂ ಇಂಡಿಯಾ ಮುಂಬರು ಟಿ20 ವಿಶ್ವಕಪ್ ಗೆ ಪ್ರಬಲ ಸ್ಪರ್ಧಿಯಾಗಿದೆ ಎಂದು ನಾಯಕ ಎಂಎಸ್ ಧೋನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲಂಕಾ ವಿರುದ್ಧದ ಟಿ20 ಸರಣಿ ಗೆಲುವಿನ ಬಳಿಕ ಮಾತನಾಡಿದ ಧೋನಿ, ಬೌಲರ್​ಗಳು ಚುಟುಕು ಕ್ರಿಕೆಟ್​ನಲ್ಲಿ ಈಗಾಗಲೆ ಸದೃಢ ಬೌಲಿಂಗ್ ಪ್ರದರ್ಶಿಸಿದ್ದರೂ, ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳಿಗೆ ಇನ್ನೂ ಸೂಕ್ತ ಅವಕಾಶ ಲಭಿಸದಿರುವುದು ಹಿನ್ನಡೆಯಾಗಿದೆ ಎಂಬುದನ್ನೂ ಧೋನಿ ಒಪ್ಪಿಕೊಂಡಿದ್ದಾರೆ.

ಇದೇ ವೇಳೆ ಮಾರ್ಚ್ 8 ರಿಂದ ತವರಿನಲ್ಲೇ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ತವರಿನ ವಾತಾವರಣ ಲಾಭದಾಯಕವೆನಿಸಲಿದೆ ಎಂದು ಧೋನಿ ಹೇಳಿದ್ದಾರೆ. ಈ ಬಾರಿ ಭಾರತದಲ್ಲೇ ನಡೆಯಲಿರುವ ಟೂರ್ನಿಯಲ್ಲಿ ಸ್ಪಿನ್ನರ್​ಗಳೂ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಐಪಿಎಲ್ ಅನುಭವವೂ ಇಲ್ಲಿ ಲಾಭದಾಯಕ’ ಎಂದರು.

Write A Comment