ಮನೋರಂಜನೆ

Samsung Galaxy S7 ಮಾದರಿಯ ಧ್ರಡೀಕರಿಸಿದ ಚಿತ್ರಗಳು

Pinterest LinkedIn Tumblr

Samsung Galaxy S7 ಮತ್ತು S7 Edge ಮಾದರಿಗಳನ್ನು ಇದೇ ತಿಂಗಳ 21ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಸ್ಯಾಮ್‌ಸಂಗ್ ತನ್ನ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದೆ. ಇದೇ ಸಮಯದಲ್ಲಿ ನಮಗೆ ಇನ್ನಷ್ಟು ಧ್ರಡೀಕರಿಸಿದ ಚಿತ್ರಗಳು Evan Blass (@evleaks) ಎಂಬವರ ಟ್ವಿಟ್ಟರ್ ಖಾತೆಯಿಂದ ಲಭ್ಯವಾಗಿವೆ.

ಮೊದಲನೇಯದಾಗಿ, Samsung Galaxy S7. ಇದು ಸುವರ್ಣ(Golden) ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಾಗಲಿದೆ.

samsung_s72_1

ಮುಂದಿನ ಮಾದರಿಯು Samsung Galaxy S7 Edge ಆಗಿದೆ. ಇದು ಸುವರ್ಣ ಮತ್ತು ಕಪ್ಪು ಬಣ್ಣಗಳ ಹೊರತಾಗಿ ಹೆಚ್ಚುವರಿ ಬೆಳ್ಳಿ-ಬೂದು (Silver-Gray) ಬಣ್ಣದಲ್ಲಿ ಲಭ್ಯವಾಗಿದೆ.

samsung_s72_2

ಇವೆಲ್ಲಾ ಚಿತ್ರಗಳು ಮುಂದೆ ಬಿಡುಗಡೆಯಾಗಲಿರುವ S7 ಮಾದರಿಗಳ ವಿನ್ಯಾಸ ಮತ್ತು ಬಣ್ಣಗಳನ್ನು ಧ್ರಡೀಕರಿಸುತ್ತವೆ. ಹೆಚ್ಚಿನ ಬಣ್ಣಗಳ ಬಗ್ಗೆ ಈಗ ಯಾವುದೇ ಮಾತು ಇಲ್ಲದಿದ್ದರೂ ಮುಂದೆ S7 ಮಾದರಿಗಳು ಹೆಚ್ಚುವರಿ ಬಣ್ಣಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸ್ಯಾಮ್‌ಸಂಗ್ ಈ ಮೊದಲು ಕೂಡ ಮಾರುಕಟ್ಟೆ ಪ್ರತಿಕ್ರಿಯೆಗಳಿಗೆ ಅನುಸಾರವಾಗಿ ಹೆಚ್ಚುವರಿ ಬಣ್ಣಗಳಲ್ಲಿ ತನ್ನ ಫೋನ್ ಮಾದರಿಗಳನ್ನು ಬಿಡುಗಡೆ ಮಾಡಿತ್ತು.
ಸ್ಯಾಮ್‌ಸಂಗ್ ಗ್ಯಾಲಕ್ಸೀ S7 ಮಾದರಿಯು ಸ್ವಲ್ಪ ಸಣ್ಣದಾದ 5.2 ಇಂಚಿನ ಡಿಸ್‌ಪ್ಲೇ ಸ್ಕ್ರೀನ್ನೊಂದಿಗೆ ಬಿಡುಗಡೆಯಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸೀ S7 ಎಡ್ಜ್ ಮಾದರಿಯು 5.5 ಇಂಚಿನ ಡಿಸ್‌ಪ್ಲೇ ಸ್ಕ್ರೀನ್ನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಆಯಾಮಗಳು ಬದಲಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಯಾವುದಕ್ಕೂ MWC 2016 ಕಾರ್ಯಕ್ರಮಕ್ಕೆ ಕಾದುನೋಡಬೇಕಾಗಿದೆ.

He is a Software Engineer from Moodbidri currently living in Kuwait. He likes to travel and post interesting things about technology. He is the designer of Kannadigaworld.com. You may follow him on FB at fb.com/alanpaladka

Write A Comment