ಮನೋರಂಜನೆ

ರಣ್‌ಸಿಂಗ್ ಗ್ರೋವರ್ ಪರ ಬಿಪ್ಸ್ ವಕಾಲತ್ತು

Pinterest LinkedIn Tumblr

bifasaಬಾಲಿವುಡ್‌ನ ಬಿಪಾಶಾ ಬಸು ಮತ್ತು ಕರಣ್‌ಸಿಂಗ್ ಗ್ರೋವರ್ ಇಬ್ಬರೂ ಈಗ ತೀರಾ ಅಂದ್ರೆ ತೀರಾ ಹತ್ತಿರ ಹತ್ತಿರ ಆಗ್ತಾ ಇದಾರೆ ಅಂತ ಈ ಬಾಲಿವುಡ್ ಮಂದಿ ಗುಲ್ಲೆಬ್ಬಿಸಿದ್ದೇ ಬಂತು, ಬಿಪ್ಸ್ ಕೇಳಿದ್ರೆ ಇಲ್ಲಾ… ಬಿಡ್ರೀ… ಅಂಥಾದ್ದೇನೂ ನಮ್ಮ ನಡುವೆ ಇಲ್ವೆ ಇಲ್ಲ..

ಸುಖಾ ಸುಮ್ನೆ ಈ ತರ್ಲೆಿಗಳು ಈ ತರಹ ಸುದ್ದಿಗಳನ್ನು ಹಬ್ಬಿಸಿ ಮಜಾ ನೋಡ್ತಾರೆ ಅಂತಾಳೆ. ಹಾಗಾದ್ರೆ ಗ್ರೋವರ್ ಪರ ವಕಾಲತ್ ಮಾಡೋದ್ಯಾಕೆ ಅನ್ನೋದು ಬಾಲಿವುಡ್ ಪ್ರಶ್ನೆ. ಈ ಪ್ರಶ್ನೆಗೆ ಬಾಲಿವುಡ್‌ನೋರೇ ಕೊಡೋ ಉತ್ತರ ಏನ್ ಗೊತ್ತಾ… ನನ್ ಫ್ರೆಂಡ್ ಕರಣ್‌ಗೆ ನಿಮ್ಮ ಚಿತ್ರದಲ್ಲಿ ಒಂದು ಕೆಲಸ ಕೊಡ್ರೀ… ಅಂತ ಪರಿಚಯದೋರ್ನಡ ಕೇಳ್ತಿದಾಳಂತೆ ಬಿಪ್ಸಿ.

ಹೀಗಂತ ಒಂದ್ ಸುದ್ದಿ.
ಹೋದ ವರ್ಷ ಇದೇ ಕರಣ್ ನಟಿಸಿದ್ದ ಚಿತ್ರ ಹೇಟ್ ಸ್ಟೋರಿ-3 ಬಾಕ್ಸ್ ಆಫೀಸ್‌ನಲ್ಲಿ ಸಾಕಷ್ಟು ಜಯಭೇರಿ ಬಾರಿಸಿದ್ರೂ ಅದೇಕೋ ಅಲ್ಲಿಂದ ಈಚೆಗೆ ಅವನನ್ನು ಯಾರೂ ಕ್ಯಾರೇ ಅಂದಿಲ್ವಂತೆ. ಯಾವುದು ನಿಜವೋ ಯಾವುದು ಸುಳ್ಳೋ ಗೊತ್ತಿಲ್ಲ.. ಅದೇನೇ ಇರ್ಲಿಂ ಬಿಪ್ಸಿ-ಕರಣ್ ಮದುವೆ ಆಗೋದು ಗ್ಯಾರಂಟಿ ಅಂತಾರೆ ಈ ಬಾಲಿವುಡ್ ಮಂದಿ…

Write A Comment