ತುಮಕೂರು. ಫೆ. 08 : ಜೆಡಿಎಸ್ ಅವರಿಗೆ ತಿಥಿ ಊಟ ಮಾಡೇ ಅಭ್ಯಾಸ, ಅವರಿಗೆ ಮದುವೆ ಊಟ ಮಾಡಿ ಅಭ್ಯಾಸ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಕಿಡಿಕಾರಿದ್ದಾರೆ.
ತುಮಕೂರಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಿಎಮ್ ಸಿದ್ದರಾಮಯ್ಯ ಜೆಡಿಎಸ್ ವಿರುದ್ಧ ಹರಿಹಾಯ್ದರು. ಕುಮಾರಸ್ವಾಮಿ ಹೇಳುತ್ತಾರೆ ನಮ್ಮ ಪಕ್ಷ ದುಡ್ಡು ಖರ್ಚು ಮಾಡಿ ಗೆಲ್ಲುತ್ತಿದ್ದಾರೆ ಅಂಥ, ಕುಮಾರಸ್ವಾಮಿ ಹೇಳ ಬೇಕು ಮಂಡ್ಯದಲ್ಲಿ ಕೋಲಾರದಲ್ಲಿ. ತುಮಕೂರಿನಲ್ಲಿ ಎಷ್ಟು ಖರ್ಚು ಮಾಡಿದ್ರು ಅಂತಾ ಸವಾಲು ಹಾಕಿದರು.
ಪರಿಷತ್ ಚುನಾವಣೆಯಲ್ಲಿ 4 ಕಡೆ ಗೆಲ್ಲಲು ಎಷ್ಟು ಖರ್ಚು ಮಾಡಿದ್ದಾರೆ, ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ನಮ್ಮ ತಟ್ಟೆಯಲ್ಲಿ ನೋಣಬಿದ್ದಿದೆ ಎಂಬುದು ಅವರಿಗೆ ದೊಡ್ಡ ವಿಚಾರ, ಅವರಿಗೆ ಬೇರೆ ಕೆಲಸವಿಲ್ಲ, ನನ್ನ ವಾಚ್, ಕನ್ನಡಕದ ಬಗ್ಗೆ ಮಾತಾನಾಡುತ್ತಾರೆ. ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಕೋಮುವಾದಿ ಪಕ್ಷ ಆದ್ರೂ ಅವರಿಗೆ ನಮ್ಮ ಪಕ್ಷ ಸೋಲಿಸ ಉದ್ದೇಶ. ಇದೀಗ 3 ಕಡೆ ಬೈ ಎಲೆಕ್ಷನ್ ನಡೀತಿದೆ. ಆದರೆ 3 ಕಡೆಯೂ ಕೂಡ ಅಲ್ಪ ಸಂಖ್ಯಾತರನ್ನ ತಂದು ನಿಲ್ಲಿಸಿದ್ದಾರೆ. ಅವರಿಗೆ ಅಭ್ಯರ್ಥಿಗಳೇ ಇರಲಿಲ್ಲ ಆದರೂ ಹುಡುಕಿ ತಂದು ನಿಲ್ಲಿಸಿದ್ದಾರೆ. ಎಂದು ಅವರು ಟೀಕಿಸಿದರು.