ರಾಷ್ಟ್ರೀಯ

ಭಾರತದ ಮೊದಲ ಏವಿಯೇಷನ್ ಪಾರ್ಕ್ ಗುಜರಾತ್​ನಲ್ಲಿ ಸ್ಥಾಪನೆ

Pinterest LinkedIn Tumblr

aviation_fiಅಹಮದಾಬಾದ್: ಗುಜರಾತ್​ನಲ್ಲಿ ದೇಶದ ಮೊಟ್ಟ ಮೊದಲ ಏವಿಯೇಷನ್ ಪಾರ್ಕ್ ನಿರ್ಮಾಣ ಮಾಡಲು ಗುಜರಾತ್ ಸರ್ಕಾರ ತೀರ್ಮಾನಿಸಿದೆ. ಏವಿಯೇಷನ್ ಪಾರ್ಕ್​ನಲ್ಲಿ ತರಬೇತಿ ಶಾಲೆ, ಹೆಲಿಪ್ಯಾಡ್ ಜತೆಗೆ ಸಣ್ಣ ಪ್ರಮಾಣದ ವಿಮಾನ ಸಂಬಂಧಿ ಭಾಗಗಳ ನಿರ್ಮಾಣ ಘಟಕ ಇರಲಿವೆ.

ಏವಿಯೇಶನ್ ಪಾರ್ಕ್​ನಲ್ಲಿ ವಿಮಾನಯಾನ ವಲಯ ಕುರಿತು ವಿದ್ಯಾರ್ಥಿಗಳಿಗೆ, ವೃತ್ತಿಪರರು, ನೀತಿ ನಿರೂಪಕರು ಮತ್ತು ವ್ಯಾಪಾರಿಗಳ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಗುಜರಾತ್ ರಾಜ್ಯ ವಿಮಾನಯಾನ ಮೂಲಸೌಕರ್ಯ ಅಭಿವೃದ್ಧಿ ಪ್ರಾಧಿಕಾರ(ಜಿಯುಜೆಎಸ್​ಎಎಲ್)ದ ಅಧಿಕಾರಿಗಳು ತಿಳಿಸಿದ್ದಾರೆ.

ಅಹಮದಾಬಾದ್​ನಿಂದ 30 ಕಿ.ಮೀ. ದೂರದಲ್ಲಿರುವ ಬಗೋಡ್ರಾ ಗ್ರಾಮದ ಬಳಿ ಏವಿಯೇಶನ್ ಪಾರ್ಕ್ ಸ್ಥಾಪನೆಯಾಗುತ್ತಿದ್ದು, ವಿಮಾನ ಬಿಡಿಭಾಗ ಉತ್ಪಾದನೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಿರ್ವಹಿಸಲಿದೆ. ಪ್ರಪಂಚದಲ್ಲಿ ಇಂತಹ ಪಾರ್ಕ್​ಗಳು ಕೇವಲ 3-4 ಮಾತ್ರ ಇದ್ದು, ಭಾರತದಲ್ಲಿ ಇದೇ ಮೊದಲ ಬಾರಿಗೆ ಏವಿಯೇಷನ್ ಪಾರ್ಕ್ ಸ್ಥಾಪಿಸಲಾಗುತ್ತಿದೆ ಎಂದು ಜಿಯುಜೆಎಸ್​ಎಎಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಜಯ್ ಚೌಹಾನ್ ತಿಳಿಸಿದರು.

ಪಾರ್ಕ್​ಗಾಗಿ 60 ಹೆಕ್ಟೆರ್ ಜಾಗ ಗುರುತಿಸಿದ್ದು, ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಯೋಜನೆ ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ ಎಂದು ನಾಗರಿಕ ವಿಮಾನಯಾನ ಇಲಾಖೆ ನಿರ್ದೇಶಕ ಚೌಹಾನ್ ಹೇಳಿದ್ದಾರೆ.

Write A Comment