
ಮುಂಬಯಿ: ಅಸಹಿಷ್ಣುತೆ ಬಗ್ಗೆ ಹೇಳಿಕೆ ನೀಡಿ ದೇಶದ್ಯಾಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬಾಲಿವುಡ್ ನಟರಾದ ಆಮೀರ್ ಖಾನ್ ಮತ್ತು ಶಾರೂಖ್ ನಂತರ ಈಗ ಮತ್ತೊಬ್ಬ ನಟ ಕರಣ್ ಜೋಹರ್ ಸುದ್ದಿಯಲ್ಲಿದ್ದಾರೆ.
ಬಾಲಿವುಡ್ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಬಗ್ಗೆ ಝೀ ಜೈಪುರ್ ಲಿಟ್ರೇಚರ್ ಫೆಸ್ಟಿವಲ್ ನಲ್ಲಿ ಮಾತನಾಡಿ ವಿವಾದಕ್ಕೀಡಾಗಿದ್ದಾರೆ.
ಇಂದಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ದೊಡ್ಡ ಜೋಕ್ ಆಗಿದೆ ಎಂದು ಹೇಳಿರುವ ಅವರು, ನಿಮ್ಮ ಮನಸ್ಸಿಗೆ ತೋಚಿದ್ದನ್ನು ಹೇಳಿದರೇ ನೀವು ಜೈಲು ಪಾಲಾಗುವ ಸಾಧ್ಯತೆಯೇ ಹೆಚ್ಚು ಎಂದು ಕರಣ್ ಜೋಹರ್ ವ್ಯಂಗ್ಯವಾಗಿ ಮಾತನಾಡಿದ್ದಾರೆ.
ನಾವು ನಮ್ಮ ವಯಕ್ತಿಕ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳದಂತ ದೇಶದಲ್ಲಿ ಬದುಕುತ್ತಿರುವುದಕ್ಕೆ ದುಃಖವಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುವುದು ದೊಡ್ಡ ಜೋಕ್, ಪ್ರಜಾಪ್ರಭುತ್ವ ಎಂಬುದು ಅದಕ್ಕಿಂತ ದೊಡ್ಡ ಜೋಕ್ ಎಂದು ಹೇಳಿರುವ ಕರಣ್ ಜೋಹರ್ ಪ್ರಜಾಪ್ರಭುತ್ವ ಎಂಬುದು ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.