ಚಿತ್ರರಂಗದಲ್ಲಿ ಪೌರಾಣಿಕ ಚಿತ್ರಗಳು ಬರುವುದೇ ಕಡಿಮೆ ಅಂತಹುದರಲ್ಲಿ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಿದ್ದೇಗೌಡ ಧೈರ್ಯ ಮಾಡಿ ಈ “ದಕ್ಷಯಜ್ಞ” ಪೌರಾಣಿಕ ಚಿತ್ರ ನಿರ್ದೇಶನ ಮಾಡಿದ್ದು ಅದನ್ನು ಬಿಡುಗಡೆ ಮಾಡಲು ಎಲ್ಲಾ ರೀತಿಯ ಸಿದ್ದತೆಗಳನ್ನೂ ಮಾಡಿದ್ದಾರೆ.
“ದಕ್ಷಯಜ್ಞ” ಚಿತ್ರ ಪೌರಾಣಿಕ ಹಿನ್ನೆಲೆಯನ್ನು ಒಳಗೊಂಡಿದೆ.ಅದಕ್ಕಾಗಿ ಹೊಸಬರನ್ನೇ ಅದರಲ್ಲಿಯೂ ವೃತ್ತಿಪರ ರಂಗಭೂಮಿ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಸಿನಿಮಾದ ಪರಿಭಾಷೆಯ ಬಗ್ಗೆ ತರಬೇತಿ ನೀಡಿ ಸದ್ದುಗದ್ದಲವಿಲ್ಲದೆ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ.
ನೀನಾಸಂ,ರಂಗಾಯಣ,ನಟನಾ ಸೇರಿದಂತೆ ವಿವಿಧ ರಂಗ ತರಬೇತಿ ನೀಡುತ್ತಿರುವ ಶಾಲೆಗಳಿಗೆ ಭೇಟಿ ನೀಡಿ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.ಯಾವ ಅನುಭವಿ ಕಲಾವಿದರಿಗೂ ಕಡಿಮೆ ಇಲ್ಲದಂತೆ ಹೊಸಬರು ನಟಿಸಿದ್ದಾರೆ.ಚಿತ್ರ ನೂರಕ್ಕೆ ನೂರರಷ್ಟು ಗೆಲವು ಸಾಧಿಸಲಿದೆ ಎನ್ನುವ ವಿಶ್ವಾಸ ನನ್ನದು ಎಂದು ಮಾತಿಗಿಳಿದರು ನಿರ್ದೇಶಕ ಸಿದ್ದೇಗೌಡ.
ಸಿದ್ದೇಗೌಡ ಚಿತ್ರ ಮಾಡುವುದಕ್ಕೆ ಅವರ ಸಹೋದರೂ ಸೇರಿದಂತೆ ಮನೆ ಮಂದಿಯೆಲ್ಲಾ ಸಹಕಾರ ನೀಡಿದ್ದಾರೆ ಅದರ ಫಲವೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.ಮೈಸೂರು,ಶ್ರೀರಂಗಪಟ್ಟಣ,ಬೆಂಗಳೂರು ಸೇರಿದಂತೆ ವಿವಿಧ ಕಡೆ ಚಿತ್ರೀಕರಣ ಮಾಡಲಾಗಿದ್ದು ಸರಿ ಸುಮಾರು ೨ ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚಾಗಿದೆ ಎಂದು ಹೇಳಿಕೊಂಡರು.
ಚಿತ್ರದಲ್ಲಿ ೨೫ ನಿಮಿಷಗಳಷ್ಟು ಸಿಜಿ ವರ್ಕ್ ಬರುತ್ತದೆ ಅದರ ಕೆಲಸ ಇನ್ನೂ ಅಂತಿಮವಾಗಬೇಕಾಗಿದೆ.ಒಳ್ಳೆಯ ಕಥಾ ಹಂದರವಿರುವ ಪೌರಾಣಿಕ ಚಿತ್ರ ಇದು.ಎಲ್ಲರಿಗೂ ಚಿತ್ರ ಇಷ್ಟವಾಗಲಿದೆ ಎನ್ನುವ ವಿಶ್ವಾಸ ನಿರ್ದೇಶಕರದ್ದು. ಚಿತ್ರದಲ್ಲಿ ಭ್ರೂಣ ಹತ್ಯೆ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಪ್ರಸ್ತುತ ಕಾಲಕ್ಕೆ ಸೂಕ್ತವಾಗುವ ರೀತಿ ಚಿತ್ರ ಕಥೆಯನ್ನು ಎಣೆಯಲಾಗಿದೆ.೬ ಹಾಡು,೩ ಕಂದ ಪಂದ್ಯ ಮತ್ತು ೨ ಶ್ಲೋಕಗಳಿವೆ ಎಂದು ವಿವರ ನೀಡಿದರು ನಿರ್ದೇಶಕರು.
ಪ್ರಮುಖ ಪಾತ್ರದಲ್ಲಿ ನಟಿಸಿರುವ ಸೋಮು, ಮೂಲತಃ ರಂಗಭೂಮಿ ಕಲಾವಿದರು ನಮಗೆ ಸಿನಿಮಾದ ಗಂಧಗಾಳಿ ಗೊತ್ತಿರಲಿಲ್ಲ ಅದನ್ನ ನಿರ್ದೇಶಕರು ಕಲಿಸಿಕೊಟ್ಟಿದ್ದಾರೆ.ಜೊತೆಗೆ ಚಿತ್ರ ಚೆನ್ನಾಗಿ ಮೂಡಿ ಬಂದಿದೆ.ನಾವೂ ಎಂದೂ ಸಿನಿಮಾ ರಂಗಕ್ಕೆ ಬರುತ್ತೇವೆ ಎಂದು ಭಾವಿಸಿರಲಿಲ್ಲ ಅವಕಾಶ ಸಿಕ್ಕಿದೆ ಅದನ್ನು ಸದುಪಯೋಗ ಪಡಿಸಿಕೊಂಡಿರುವುದಾಗಿ ಹೇಳಿದರು.
ನಿರ್ಮಾಪಕ ಶಿವ ಚಿತ್ರ ಚೆನ್ನಾಗಿ ಮೂಡಿ ಬಂದಿರುವುದರಿಂದ ಚಿತ್ರ ಯಶಸ್ವಿಯಾಗುವ ನಂಬಿಕೆ ಇದೆ.ಚಿತ್ರಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು. ಮತ್ತೊಬ್ಬ ಕಲಾವಿದ ನಿರಂಜನ್ ತಮ್ಮ ಪಾತ್ರದ ಬಗ್ಗೆ ವಿವರ ನೀಡಿ ಸಹಕಾರ ಕೋರಿದರು.