ಮನೋರಂಜನೆ

ಅನುಷ್ಕಾ ಶರ್ಮಾ ಕತ್ರಿನಾ ಕುರಿತು ಹೇಳಿದ್ದೇನು?

Pinterest LinkedIn Tumblr

5anushkaಸಾಮಾನ್ಯವಾಗಿ ರಂಗೀನ್‌ ದುನಿಯಾದ ನಟಿಮಣಿಯರು ಒಬ್ಬರನ್ನು ಕಂಡರೆ ಮತ್ತೊಬ್ಬರು ಮೂಗು ಮುರಿಯುವುದೇ ಹೆಚ್ಚು. ಆದರೆ ಇಲ್ಲೊಬ್ಬ ಬಾಲಿವುಡ್‌ ಬೆಡಗಿ ಮತ್ತೊಬ್ಬ ನಟಿಯನ್ನು ಹಾಡಿ ಹೊಗಳಿದ್ದಾಳೆ ಎಂದರೆ ನೀವು ನಂಬಲೇಬೇಕು.

ಹೌದು, ಸದ್ಯಕ್ಕೆ ಸಲ್ಮಾನ್‌ ಖಾನ್‌ ಅಭಿನಯದ ‘ಸುಲ್ತಾನ್‌’ ಸಿನಿಮಾದಲ್ಲಿ ನಾಯಕಿಯ ಪಾತ್ರ ಗಿಟ್ಟಿಸಿಕೊಂಡಿರುವ ಅನುಷ್ಕಾ ಶರ್ಮಾ, ಕತ್ರಿನಾಳನ್ನು ಮನಸಾರೆ ಹೊಗಳಿದ್ದಾಳೆ.

ಕತ್ರಿನಾ ಹಾಗೂ ಆದಿತ್ಯ ರಾಯ್‌ ಕಪೂರ್‌ ಅಭಿನಯದ ‘ಫಿತೂರ್‌’ ಚಿತ್ರದಲ್ಲಿ ‘ಪಶ್ಮಿನಾ’ ಎಂಬ ಹಾಡಿಗೆ ರೋಮಾಂಟಿಕ್‌ ಆಗಿ ಹೆಜ್ಜೆ ಹಾಕಿರುವ ಕತ್ರಿನಾಳನ್ನು ಅನುಷ್ಕಾ ಹಾಟ್‌ ಅಂಡ್‌ ಫಿಟ್‌ ಎಂದು ಬಣ್ಣಿಸಿದ್ದಾಳೆ. ಈ ಕುರಿತು ಟ್ವಿಟರ್‌ನಲ್ಲಿ ಹೇಳಿರುವ ಅನುಷ್ಕಾ ಕ್ಯಾಟ್‌ನ ಪರ್ಫಾರ್ಮೆನ್ಸ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾಳೆ.

ಅಂದಹಾಗೆ ಅಭಿಷೇಕ್‌ ಕಪೂರ್‌ ನಿರ್ದೇಶನವಿರುವ ಫಿತೂರ್‌ ಚಿತ್ರ ಈಗಾಗಲೇ ಬಿ-ಟೌನ್‌ನಲ್ಲಿ ಸದ್ದು ಮಾಡುತ್ತಿದ್ದು, ಫೆಬ್ರವರಿ 12ರಂದು ತೆರೆಗೆ ಬರಲಿದೆ.

Write A Comment