ಮನೋರಂಜನೆ

ಬಿಗ್‌ಬಾಸ್‌ಗಾಗಿ ಪಾದರಕ್ಷೆಗಳಲ್ಲಿ ದೇಗುಲ ಪ್ರವೇಶ : ಸಲ್ಲು, ಶಾರೂಕ್‌ ವಿರುದ್ಧ ಕೋರ್ಟ್‌ ಕೇಸ್‌!

Pinterest LinkedIn Tumblr

sharukಮೀರತ್‌‌: ಸಲ್ಮಾನ್‌ಖಾನ್‌, ಶಾರೂಖ್‌ ಖಾನ್‌ ಇಬ್ಬರಿಗೂ ಅವರವೇ ಆದ ಸಮಸ್ಯೆಗಳಿವೆ. ಈಗ ಇಬ್ಬರು ಜಂಟಿಯಾಗಿ ಒಂದು ಕೇಸ್‌ನಲ್ಲಿ ಸಿಕ್ಕಿಕೊಂಡಿದ್ದಾರೆ.

ಖಾಸಗಿ ಟಿವಿ ಚಾನಲ್‌ನ ರಿಯಾಲಿಟಿ ಶೋಗಾಗಿ ಸಲ್ಮಾನ್ , ಶಾರೂಖ್ ಪಾದರಕ್ಷೆಗಳೊಂದಿಗೆ ದೇಗುಲ ಪ್ರವೇಶಿಸಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ.  ಈ ಕುರಿತು ಹಿಂದು ಮಹಾಸಭಾ ಉತ್ತರ ಪ್ರದೇಶದ ಮೀರತ್‌ ಕೋರ್ಟ್‌ನಲ್ಲಿ ದೂರು ಸಲ್ಲಿಸಿದೆ. ಅಂತೆಯೇ ನ್ಯಾಯಾಲಯ ಈ ದೂರನ್ನು ವಿಚಾರಣೆಗೆ ಸ್ವೀಕರಿಸಿದೆ. ಜನವರಿ 18 ರಂದು ವಿಚಾರಣೆ ನಡೆಸಲು ನಿರ್ಧರಿಸಿದೆ.

ಬಿಗ್‌ಬಾಸ್ ರಿಯಾಲಿಟಿ ಶೋಗಾಗಿ ಕಾಳಿ ದೇಗುಲದ ಸೆಟ್‌ ನಿರ್ಮಿಸಲಾಗಿತ್ತು. ಆ ಶೋನಲ್ಲಿ ಸಲ್ಮಾನ್ ಆ್ಯಂಕರ್‌. ಶಾರೂಖ್ ಅತಿಥಿ.  ಇಬ್ಬರು ದೇಗುಲದ ಸೆಟ್‌ನಲ್ಲಿ ಶೂಟಿಂಗ್ ಮಾಡಿದ್ರು. ಡಿಸೆಂಬರ್‌ನಲ್ಲಿ ಇದು ಪ್ರಸಾರವಾಗಿತ್ತು. ಆಗ ಹಿಂದೂ ಮಹಾಸಭಾದ ಮೀರತ್ ಘಟಕದ ಅಧ್ಯಕ್ಷ ಭರತ್ ರಾಜಪೂತ್‌ ಅವರು ಈ ಕುರಿತು ಚಾನಲ್‌ನ ಗಮನ ಸೆಳೆದಿದ್ದರಂತೆ. ಪೊಲೀಸರಿಗೂ ದೂರು ಸಲ್ಲಿಸಿದ್ದರಂತೆ. ಆದರೆ ಯಾರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎನ್ನಲಾಗಿದೆ.

ಹೀಗಾಗಿ ಕೊನೆಯ ಅಸ್ತ್ರವಾಗಿ ಭರತ್ ರಾಜಪೂತ್‌ ಶಾರೂಖ್, ಸಲ್ಮಾನ್, ಕಾರ್ಯಕ್ರಮದ ನಿರ್ದೇಶಕ ಹಾಗೂ ಚಾನಲ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.

Write A Comment