ಮುಂಬೈ, ಜ.15- ಖ್ಯಾತ ಬಾಲಿವುಡ್ ನಟ ವಿವೇಕ್ (66)ರವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ವಿವೇಕ್ ಅಮೀರ್ ಖಾನ್ ನಟನೆಯ ಲಗಾನ್ ಚಿತ್ರದಲ್ಲಿ ಖ್ಯಾತ ಜ್ಯೋತಿಷಿ ಗುರಾನ್ ಪಾತ್ರದಲ್ಲಿ ಮಿಂಚಿದ್ದರು.
ಅಲ್ಲದೆ ಶಾರುಖ್‌ಖಾನ್ ನಟನೆಯ ಸ್ವದೇಶ್, ಬಂಟಿ ಔರ್ ಬಬ್ಲಿ , ಸನ್ ಆಫ್ ಸರ್ದಾರ್, ಅಗ್ನಿಪತ್, ಬ್ಯಾಂಡಿಟ್ ಕ್ವೀನ್, ಮುಂಬೈ ಮಸ್ತ್ ಕಲಂದರ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಕಿರುತೆರೆಯಲ್ಲೂ ಮಿಂಚಿರುವ ವಿವೇಕ್ ಮಹಾಭಾರತ, ಭರತ್ ಎಕ್ ಕೊಜೆ ಮತ್ತು ಅಗೋರಿಯಲ್ಲೂ ಬಣ್ಣ ಹಚ್ಚಿದ್ದಾರೆ.