ಮನೋರಂಜನೆ

ಗುಪ್ಟಿಲ್ ದಾಖಲೆಯ ಅರ್ಧಶತಕ : ನ್ಯೂಜಿಲ್ಯಾಂಡ್‌ಗೆ 10 ವಿಕೆಟ್‌ಗಳ ಜಯ

Pinterest LinkedIn Tumblr

cricket

ಕ್ರಿಸ್ಟ್‌ಚರ್ಚ್, ಡಿ.28- ಮಾರ್ಟಿನ್ ಗುಪ್ಟಿಲ್ ರ ರೋಚಕ ಆಟದ ನೆರವಿನಿಂದ ಶ್ರೀಲಂಕಾ ವಿರುದ್ಧ ನಡೆದ 2ನೆ ಏಕದಿನ ಪಂದ್ಯದಲ್ಲಿ ಇನ್ನೂ 250 ಎಸೆತಗಳು ಉಳಿದಿರುವಂತೆ ನ್ಯೂಜಿಲ್ಯಾಂಡ್ ವಿರೋಚಿತ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ನ್ಯೂಜಿಲ್ಯಾಂಡ್‌ನ ವೇಗದ ಬೌಲಿಂಗ್ ದಾಳಿಗೆ ಸಿಲುಕಿ 117 ರನ್‌ಗಳಿಗೆ ಅಲೌಟಾಯಿತು. ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್‌ನ ಆರಂಭಿಕ ದಾಂಡಿಗರಾದ ಮಾರ್ಟಿನ್ ಗುಪ್ಟಿನ್ (93 ರನ್, 30 ಎಸೆತ, 9 ಬೌಂಡರಿ, 8 ಸಿಕ್ಸರ್) ಹಾಗೂ ಲ್ಯಾಥಮ್ ( 17 ರನ್, 20 ಎಸೆತ, 2 ಬೌಂಡರಿ)ರ ರೋಚಕ ಆಟದ ನೆರವಿನಿಂದ ಮೆಕಲಂ ಪಡೆ 8.2 ಓವರ್‌ಗಳಲ್ಲೇ ಗೆಲುವಿನ ನಗೆ ಬೀರಿತು.
ಲಂಕಾ ಪರದಾಟ:
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಂಕಾದ ಪರ ಕುಲಶೇಖರ (19), ಆರಂಭಿಕ ದಾಂಡಿಗ ಗುಣದಿಲಾಕಾ (17) , ನಾಯಕ ಆಂಜಲೋ ಮ್ಯಾಥ್ಯೂಸ್ (17) ಬಿಟ್ಟರೆ ಉಳಿದ ಅಗ್ರಮಾನ್ಯ ಬ್ಯಾಟ್ಸ್‌ಮನ್‌ಗಳು ಎರಡಂಕಿಯನ್ನು ದಾಟುವಲ್ಲಿ ಎಡವಿ ಲಂಕಾ 117 ರನ್‌ಗಳಿಗೆ ಅಲೌಟಾಯಿತು. ನ್ಯೂಜಿಲ್ಯಾಂಡ್ ಪರ ಎಂ.ಜೆ.ಹೆನ್ರಿ (4 ವಿಕೆಟ್), ಮೆಕ್‌ಲ್ಯಾಗನ್ (3 ವಿಕೆಟ್) ಹಾಗೂ ಬ್ರೆಸ್‌ವೆಲ್ (1 ವಿಕೆಟ್ ) ಕಬಳಿಸಿದರು.

ಈ ಗೆಲುವಿನ ಮೂಲಕ ನ್ಯೂಜಿಲ್ಯಾಂಡ್ 5 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು.

ದಾಖಲೆಗಳ ಪಂದ್ಯ:
14.16 ರನ್‌ರೇಟ್: ಇದು ಚೇಸಿಂಗ್‌ನಲ್ಲಿ ತಂಡವೊಂದು ಗಳಿಸಿದ ಎರಡನೇ ಅತ್ಯಾಧಿಕ ರನ್‌ರೇಟ್. ಇದಕ್ಕೂ ಮುನ್ನ ನ್ಯೂಜಿಲ್ಯಾಂಡ್ ಬಾಂಗ್ಲಾ ವಿರುದ್ಧ 15.83 ರನ್‌ರೇಟ್‌ನಲ್ಲಿ ರನ್ ಗಳಿಸಿತ್ತು.

17 ಎಸೆತ: ಮಾರ್ಟಿನ್ ಗುಪ್ಟಿಲ್ ಅರ್ಧ ಶತಕ ಗಳಿಸಲು ತೆಗೆದುಕೊಂಡು ಏಕದಿನ ಇತಿಹಾಸದಲ್ಲಿ ಅತಿ ವೇಗವಾಗಿ ಅರ್ಧಶತಕ ಗಳಿಸಿದ ಆಟಗಾರರಾಗಿ ಗುರುತಿಸಿಕೊಂಡರು. ಎಬಿಡಿವಿಲಿಯರ್ಸ್ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಾರೆ. 117 ರನ್: ಇದು ಶ್ರೀಲಂಕಾ ನ್ಯೂಜಿಲ್ಯಾಂಡ್ ವಿರುದ್ಧ ಗಳಿಸಿದ 3ನೆ ಕನಿಷ್ಠ ಮೊತ್ತ. ಇದಕ್ಕೂ ಮುನ್ನ ಲಂಕಾ 112, 115 ರನ್‌ಗಳಿಗೆ ಅಲೌಟಾಗಿತ್ತು.

Write A Comment