ರಾಯಲ್ ಸಿನಿ ಕ್ರಿಯೇಷನ್ಸ್ ಸಂಸ್ಥೆಯಲ್ಲಿ ಸರ್ದಾರ್, ಪಿ.ಬೀರಪ್ಪ ನಿರ್ಮಿಸುತ್ತಿರುವ ಸಿನಿಮಾ ‘ಲೀಲಾ’. ಸ್ವಾರ್ಥಕ್ಕಾಗಿ ಒಂದು ಸಂಸಾರವನ್ನು ಹಾಳು ಮಾಡಿದಾಗ ಅದು ಯಾವ ರೀತಿ ಪರಿಣಾಮ ಬೀರಬಲ್ಲದು ಎಂಬ ಎಳೆಯನ್ನಿಟ್ಟುಕೊಂಡು ಚಿತ್ರಕಥೆ ಎಣೆಯಲಾಗಿದೆ.
‘ಲೀಲಾ’ ಚಿತ್ರದ ಮಾತಿನ ಭಾಗ ಹಾಗೂ ಮೂರು ಹಾಡುಗಳ ಚಿತ್ರೀಕರಣ ಪೂರ್ಣಗೊಂಡಿದ್ದು ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆ. ಈ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರು ಸುತ್ತಮುತ್ತ ಹಾಡಿನ ಚಿತ್ರೀಕರಣ ನಡೆಸುವ ಉದ್ದೇಶ ಚಿತ್ರತಂಡದ್ದು.
ಎಲ್.ಎಂ.ಗೌಡ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ರಾಜು ಶಿರಾ ಛಾಯಾಗ್ರಹಣ, ಶ್ರೀಹರ್ಷ ಸಂಗೀತ, ಮಂಜುನಾಥ್ ಎಂ.ಎನ್.ಹಳ್ಳಿ ಚಿತ್ರಕಥೆ ಮತ್ತು ಸಂಭಾಷಣೆ, ಶ್ರೀತೇಜ ಸಾಹಿತ್ಯ, ಶಂಕರ್, ಸಂದೀಪ್ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು ಸಾಹಸ, ಕುಮಾರ್ ಸಿ.ಎಚ್. ಸಂಕಲನವಿದೆ. ರೋಹಿತ್, ಆಶಿಕಾ, ಆದಿ ಲೋಕೇಶ್, ಶೋಭರಾಜ್, ವೆಂಕಟರಮಣಪ್ಪ, ಶಂಕರ್ ಭಟ್, ವೆಂಕಟೇಶಪ್ಪ, ಅಶ್ವಿನಿ, ಸಂತೋಷ್, ನಾಗೇಂದ್ರ, ಆಲಿಶಾ, ಬೀರಪ್ಪ ತಾರಾಬಳಗದಲ್ಲಿದ್ದಾರೆ.