ಕರ್ನಾಟಕ

ಮೌಢ್ಯ ನಿಷೇಧ ಕಾಯ್ದೆ ಎಲ್ಲಾ ಧರ್ಮಕ್ಕೂ ಅನ್ವಯ; ರಾಜ್ಯ ಸರ್ಕಾರ

Pinterest LinkedIn Tumblr

moudya

ಬೆಂಗಳೂರು: ಉದ್ದೇಶಿತ ಮೂಢನಂಬಿಕೆ ನಿಷೇಧ ಕಾಯ್ದೆ ಒಂದು ಧರ್ಮವನ್ನು ಗುರಿಯಾಗಿಸಿದೆ ಎಂಬ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಜನರ ನಂಬಿಕೆಗಳಿಗೆ ಅಡ್ಡಿಯಾಗದಂತೆ ಮತ್ತು ಎಲ್ಲಾ ಧರ್ಮಗಳಿಗೂ ಅನ್ವಯವಾಗುವ ಮೂಢನಂಬಿಕೆ ನಿಷೇಧ ಕಾಯ್ದೆ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ಸರ್ಕಾರ ರೂಪಿಸುವ ಮೂಢನಂಬಿಕೆ ಕಾಯ್ದೆ ಯಾವುದೇ ಒಂದು ಧರ್ಮದ ಪರ ಅಥವಾ ವಿರುದಟಛಿ ಇರುವುದಿಲ್ಲ. ಮೂಢನಂಬಿಕೆಯಿಂದ
ನೋವುಂಡವರು ಮತ್ತು ಶೋಷಣೆಗೊಳಗಾದವರ ಪರ ಇರುತ್ತದೆ ಎಂದು ಹೇಳಿದರು. ಮೂಢನಂಬಿಕೆ ನಿಷೇಧ ಕಾಯ್ದೆ ರೂಪಿಸುವ ಕುರಿತಂತೆ ಸಮಾಜ ಕಲ್ಯಾಣ ಇಲಾಖೆ ಈಗಾಗಲೇ ಒಂದು ಕರಡು ಸಿದಟಛಿಪಡಿಸಿ ಸಚಿವ ಸಂಪುಟ ಸಭೆಗೆ ಸಲ್ಲಿಸಿದೆ.

ಆ ಕುರಿತು ಇನ್ನಷ್ಟು ಅಧ್ಯಯನ ನಡೆಸಿ ಅಂತಿಮ ಕರಡು ಸಿದಟಛಿಪಡಿಸುವ ಜವಾಬ್ದಾರಿಯನ್ನು ಕಾನೂನು ಸಚಿವರಿಗೆ ವಹಿಸಲಾಗಿದೆ. ಅದರಂತೆ ಸಲಹೆ ನೀಡಲು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ನೇತೃತ್ವದ ತಂಡಕ್ಕೆ ಸೂಚಿಸಲಾಗಿದೆ. ಸಲಹೆ ನೀಡುವ ಮುನ್ನ ನಂಬಿಕೆಗಳು ಯಾವುವು, ಮೂಢನಂಬಿಕೆ ಯಾವುದು ಎಂಬುದನ್ನು ವಿಂಗಡಿಸಿ ನೀಡಬೇಕು ಎಂದು ತಿಳಿಸಲಾಗಿದೆ ಎಂದರು.

ನಿಡುಮಾಮಿಡಿ ಸ್ವಾಮೀಜಿ ನೇತೃತ್ವದ ಸಮಿತಿ ಸಮಾಜದ ವಿವಿಧ ಸಮುದಾಯದ ಜನರು, ಗಣ್ಯರು, ತಜ್ಞರು, ನಿವೃತ್ತ ನ್ಯಾಯಾಧೀಶರ ಜತೆ ಸಮಾಲೋಚಿಸಿದ ಬಳಿಕ ಸಲಹೆಗಳನ್ನು ನೀಡಲಿದೆ.

ಈ ಸಲಹೆಗಳನ್ನು ಆಧರಿಸಿ ಪಕ್ಷದ ಸಭೆಯಲ್ಲಿ ಚರ್ಚಿಸಲಾಗುವುದು. ಜತೆಗೆ ಅದಕ್ಕೆ ಸಾರ್ವಜನಿಕರ ಅಭಿಪ್ರಾಯಗಳನ್ನೂ ಪಡೆಯಲಾಗುವುದು. ಅಂತಿಮವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕಾಯ್ದೆ ರೂಪಿಸಲಾಗುವುದು ಎಂದರು. ಜನರನ್ನು ಶೋಷಣೆ ಮಾಡುವ ಮತ್ತು ಅನ್ಯಾಯಕ್ಕೊಳಗಾಗುವಂತೆ ಮಾಡುವ ಮಧ್ಯವರ್ತಿಗಳಿಂದಲೇ ಇಂದುಮೂಢನಂಬಿಕೆಗಳು ಹೆಚ್ಚಾಗುತ್ತಿವೆ. ಇಂಥವರನ್ನು ಗುರಿಯಾಗಿಸಿಕೊಂಡು ಕಾಯ್ದೆ ರೂಪಿಸಲಾಗುವುದು. ಕಾಯ್ದೆ ರೂಪಿಸುವ ಮುನ್ನ ಅದರಲ್ಲಿ ಸ್ಪಷ್ಟತೆ ಇರಬೇಕು ಎಂದು ಹೇಳಿದರು. ಈ ಹಿಂದೆ ಸರ್ಕಾರ ಕಾಯ್ದೆ ರೂಪಿಸಲು ಮುಂದಾದಾಗ, ಹಿಂದೂ ಧರ್ಮದ ನಂಬಿಕೆ ಮತ್ತು ಆಚರಣೆಗಳನ್ನು ಗುರಿಯಾಗಿಸಿಕೊಂಡು ಸರ್ಕಾರ ಮೂಢನಂಬಿಕೆ ನಿಷೇಧ ಕಾಯ್ದೆ ರೂಪಿಸಲು ಮುಂದಾಗಿದೆ ಎಂಬ ಸಾರ್ವತ್ರಿಕ ಆರೋಪ ಕೇಳಿಬಂತು. ಆದರೆ, ಸರ್ಕಾರ ಎಲ್ಲಾ ಧರ್ಮಗಳ ಮೂಢನಂಬಿಕೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಯ್ದೆ ರೂಪಿಸಲಿದೆ ಎಂದು ಭರವಸೆ ನೀಡಿದರು.

ಮಾಧ್ಯಮ ಮುಖ್ಯಸ್ಥರೊಂದಿಗೆ ಸಭೆ: ರಾಜ್ಯದಲ್ಲಿ ಟೀವಿ ಚಾನಲ್ಲುಗಳಲ್ಲಿ ಪ್ರತಿನಿತ್ಯ ಬರುವ ಜ್ಯೋತಿಷ್ಯ ವಿಚಾರದಲ್ಲಿ ಟೀವಿ ಚಾನಲ್‌ಗ‌ಳ ಮುಖ್ಯಸ್ಥರ ಜತೆ ಸಮಾಲೋಚಿಸಿದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
-ಉದಯವಾಣಿ

Write A Comment