ಅಂತರಾಷ್ಟ್ರೀಯ

ಸಂವಿಧಾನ ತಿದ್ದುಪಡಿಗೆ ನೇಪಾಳ ಸರ್ಕಾರ ಒಪ್ಪಿಗೆ

Pinterest LinkedIn Tumblr

Nepal-Constitution

ಕಠ್ಮಂಡು: ಪ್ರತಿಭಟನಾನಿರತ ಮಾಧೇಸಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಹಾಗೂ ಕ್ಷೇತ್ರ ಪುನರ್‍ವಿಂಗಡಣೆ ಬೇಡಿಕೆಗಳಿಗೆ ಪೂರಕವಾಗಿ ನೂತನ ಸಂವಿಧಾನಕ್ಕೆ ತಿದ್ದುಪಡಿ ತರಲು ನಿರ್ಧರಿಸಿರುವ ನೇಪಾಳ ಸರ್ಕಾರದ ಮಹತ್ವದ ನಡೆಯನ್ನು ಭಾರತ ಸರ್ಕಾರ ಸ್ವಾಗತಿಸಿದೆ.

ನೇಪಾಳ ಸಚಿವ ಸಂಪುಟ ಸೋಮವಾರ ಈ ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ನೇಪಾಳ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವರು ಖುದ್ದು ಭಾರತ ವಿದೇಶಾಂಗ ಸಚಿವಾಲಯಕ್ಕೆ ತಿಳಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಸದ್ಯದ ಬಿಕ್ಕಟ್ಟು ನಿವಾರಣೆ ನಿಟ್ಟಿನಲ್ಲಿ ಇದೊಂದು ನೇಪಾಳ ಸರ್ಕಾರದ ಮಹತ್ವದ ಹೆಜ್ಜೆಯಾಗಿದ್ದು, ಭಾರತ ಈ ನಡೆಯನ್ನು ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.

ಹೊಸ ಸಂವಿಧಾನದ ಪ್ರಕಾರ ಏಳು ಪ್ರಾಂತ್ಯ ರಚನೆಗೆ ಮುಂದಾಗಿರು ಸರ್ಕಾರದ ನಡೆಯಿಂದ ತಮ್ಮ ಪಾರಂಪರಿಕ ನೆಲವನ್ನು ಇಬ್ಭಾಗವಾಗಲಿದೆ. ಅಲ್ಲದೆ ಅದು ತಮ್ಮನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಯತ್ನ ಎಂದು ಮಾಧೇಸಿ ಮೂಲದ ಪಕ್ಷಗಳು ಕಳೆದ ನಾಲ್ಕು ತಿಂಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದವು.

Write A Comment