ಮನೋರಂಜನೆ

ಕ್ಯಾಲೆಂಡರ್ ಗರ್ಲ್ ಸೆರೆನಾ

Pinterest LinkedIn Tumblr

Serena-Williams

ಇದು ಕ್ಯಾಲೆಂಡರ್‍ಗಳ ಕಾಲ. ಹೊಸ ವರ್ಷಕ್ಕೆ ಇನ್ನು ಕೆಲವೇ ದಿನಗಳಿವೆ. ಸೆಲೆಬ್ರಿಟಿಗಳ ಲೋಕದಿಂದ ಕ್ಯಾಲೆಂಡರ್‍ಗಳು, ಕ್ಯಾಲೆಂಡರ್ ಗರ್ಲ್‍ಗಳ ಸುದ್ದಿಗಳು ಬರುತ್ತಲೇ ಇರುತ್ತವೆ.

ಪಿರೆಲ್ಲಿ ಪ್ರತಿ ವರ್ಷ ನಿರೀಕ್ಷೆ ಹುಟ್ಟಿಸುವ ಕ್ಯಾಲೆಂಡರ್ ಗಳಲ್ಲಿ ಒಂದು. ನಗ್ನ ಸುಂದರಿಯನ್ನು ಪುಟ ಪುಟಗಳಲ್ಲೂ ತುಂಬಿಕೊಂಡು ಬರುವ ಈ ಕ್ಯಾಲೆಂಡರ್ ಭಾರಿ ಸುದ್ದಿ ಮಾಡುತ್ತದೆ. ಆದರೆ ಈ ಬಾರಿ ಸ್ವಲ್ಪ ಭಿನ್ನವಾಗಿಯೇ ಬರುತ್ತಿದೆ. ವಿವಿಧ ಕ್ಷೇತ್ರಗಳಿಂದ 13 ಮಂದಿಯನ್ನು ಕ್ಯಾಲೆಂಡರ್‍ಗೆ ಆಯ್ಕೆ ಮಾಡಿಕೊಂಡಿದೆ.

ಅದರಲ್ಲಿ ಒಬ್ಬರು ಸೆರೆನಾ ವಿಲಿಯಮ್ಸ್. ಟೆನಿಸ್‍ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಪ್ರತಿಭಾವಂತೆ. ಕ್ರೀಡಾ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದ ಈಕೆ ಬೆತ್ತಲೆ ಬೆನ್ನನ್ನು ತೋರಿಸಿದ ಚಿತ್ರವೊಂದು ಪಿರೆಲ್ಲಿ ಕ್ಯಾಲೆಂಡರ್‍ನಲ್ಲಿ ಕಾಣಿಸಿಕೊಳ್ಳುತ್ತಿದೆ. ಕಪ್ಪು ಬಿಳುಪಿನಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರ ಸ್ತ್ರಿ ದೈಹಿಕ ಕ್ಷಮತೆ, ಸಾಮಥ್ರ್ಯ ಬಿಂಬಿಸುತ್ತದೆ ಎಂದು ಪಿರೆಲ್ಲಿ ಕ್ಯಾಲೆಂಡರ್ ನಿರ್ಮಾತೃಗಳು ಹೇಳಿದ್ದಾರೆ. ಚೆಲ್ಲಿದ ಕೂದಲು, ಬಲಿಷ್ಠವಾದ ಸ್ನಾಯುಗಳನ್ನು ಪ್ರದರ್ಶಿಸುವ ದೇಹವನ್ನು ಬಿಂಬಿಸುವ ಈ ಚಿತ್ರ ಈಗ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದೆ.

Write A Comment