ಅಂತರಾಷ್ಟ್ರೀಯ

ಕುರುಕು ತಿಂಡಿ ತಿನ್ನುವುದರಿಂದ ಒಂದೇ ವಾರದಲ್ಲಿ ಹೆಚ್ಚುತ್ತದೆ ಕೊಬ್ಬಿನ ಅಂಶ!

Pinterest LinkedIn Tumblr

junkವಾಷಿಂಗ್ ಟನ್: ಕುರುಕು ತಿಂಡಿ ತಿನ್ನುವುದರಿಂದ ಕೇವಲ ಒಂದೇ ವಾರದಲ್ಲಿ ಕೊಬ್ಬಿನ ಅಂಶವನ್ನು ಹೆಚ್ಚು ಮಾಡುತ್ತದೆ ಎಂಬುದು ಹೊಸ ಸಂಶೋಧನೆಯಿಂದ ತಿಳಿದುಬಂದಿದೆ.

ಸಮೀಕ್ಷೆಗೊಳಪಟ್ಟ ಆರು ಜನರಿಗೆ ಪ್ರತಿ ದಿನ ಪಿಜ್ಜಾ, ಬರ್ಗರ್ ಮತ್ತು ಇತರ ಜಂಕ್ ಆಹಾರ ಸೇರಿದಂತೆ 6 ,000 ಕ್ಯಾಲೊರಿ ಆಹಾರವನ್ನು ನೀಡಲಾಗಿತ್ತು, ಜಂಕ್ ಆಹಾರ ಸೇವಿಸಿದ ಎರಡೇ ದಿನಗಳಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಆರು ಜನರ ಪೈಕಿ ಮೂವರ ತೂಕದಲ್ಲಿ ಯಾವುದೇ ಬದಲಾವಣೆಗಳಾಗಿರಲಿಲ್ಲ. ಇನ್ನು ಮೂವರು ತೂಕ ಹೆಚ್ಚಿಸಿಕೊಂದಿದ್ದರು. ಜಂಕ್ ಫುಡ್ ತಿಂದ ವ್ಯಕ್ತಿಗಳಲ್ಲಿ 3 .5 ಕೆ ತೂಕ ಹೆಚ್ಚಿದ್ದು ಇನ್ಸುಲಿನ್ ಪ್ರತಿರೋಧ ಲಕ್ಷಣಗಳು ಗೋಚರಿಸಿದ್ದು,  2 ನೇ ವಿಧದ ಮಧುಮೇಹದ ಪ್ರಮುಖ ಅಂಶ ಇದಾಗಿದೆ.

ಅಮೆರಿಕನ್ನರ ಸರಾಸರಿ ಆಹಾರ ಕ್ರಮ ಹಾಗೂ ಅದು ಎರಡನೇ ಹಂತದ ಮಧುಮೇಹಕ್ಕೆ ಹೇಗೆ ಕಾರಣವಾಗಲಿದೆ ಎಂಬುದನ್ನು ತಿಳಿಯಲು ಈ ಸಂಶೋಧನೆ ನಡೆಸಲಾಗಿದೆ.

Write A Comment