ಮನೋರಂಜನೆ

ಭಾರಿ ಬಜೆಟ್ ನಲ್ಲಿ ನಿರ್ಮಾಣ ಆಗುತ್ತಿದೆ ರಜನಿಯ ‘ಎಂದಿರನ್’ ಚಿತ್ರ ! ಇಲ್ಲಿ ಎಲ್ಲವೂ ಹಾಲಿವುಡ್ ತಂತ್ರಜ್ಞರ ಕೈಚಳಕ…

Pinterest LinkedIn Tumblr

rajinikanth

ಕಬಾಲಿ ಚಿತ್ರದ ಶೂಟಿಂಗ್‍ನಲ್ಲಿ ಮುಳುಗಿರುವ ರಜನಿಕಾಂತ್ ಮುಂದಿನ ತಿಂಗಳು ಇನ್ನೊಂದು ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಶಂಕರ್ ನಿರ್ದೇಶನದ ಎಂದಿರನ್ ಚಿತ್ರದ ಎರಡನೇ ಭಾಗಕ್ಕೆ ತಯಾರಿ ನಡೆದಿದೆ. ಅದರ ಮೇಕಪ್ ಟೆಸ್ಟ್ ಮುಂದಿನ ತಿಂಗಳು ನಡೆಯಲಿದೆ. ಈಗಾಗಲೇ ಏಮಿ ಜಾಕ್ಸನ್ ನಾಯಕಿ ನಟಿಸುವ ಸುದ್ದಿಯಾಗಿದೆ.

ಖಳನಾಯಕನ ಪಾತ್ರದಲ್ಲಿ ಹಾಲಿವುಡ್ ನಟ ಆರ್ನಲ್ಡ್ ಶ್ವಾಜೆನೆಗರ್ ನಟಿಸುವುದು ಬಹುತೇಕ ಖಾತ್ರಿಯಾಗಿದೆ. ಭಾರಿ ದೊಡ್ಡ ಪ್ರಮಾಣ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವುದರಿಂದ ಹಾಲಿವುಡ್ ತಂತ್ರಜ್ಞರನ್ನು ಚಿತ್ರತಂಡ ಒಳಗೊಂಡಿದೆ.

ಮೇಕಪ್ ಟೆಸ್ಟ್ ಮಾಡುವುದಕ್ಕೆ ಬರುತ್ತಿರುವುದೂ ಹಾಲಿವುಡ್‍ನ ಮೇಕಪ್ ಆರ್ಟಿಸ್ಟ್. ಅವತಾರ್ ಚಿತ್ರಕ್ಕೆ ಕೆಲಸ ಮಾಡಿದ ಸಿಯಾನ್ ಫೂಟ್ ರಜನಿ ಮೇಕಪ್ ಟೆಸ್ಟ್ ಮಾಡುವವರಿದ್ದಾರೆ. ಅಲ್ಲಿಗೆ ಎಂದಿರನ್ 2 ಪ್ರಚಾರ ಕಾರ್ಯ ಆರಂಭವಾದ ಹಾಗಾಯ್ತು!

Write A Comment