ಮನೋರಂಜನೆ

ಅನುಚಿತ ವರ್ತನೆ ಕುರಿತ ದೀಪಾಲಿ ಸಯಾದ್ ದೂರಿನಲ್ಲಿ ಹುರುಳಿಲ್ಲ: ಕಪಿಲ್ ಶರ್ಮ

Pinterest LinkedIn Tumblr

kapil

ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುವ ಖ್ಯಾತ ಆಂಕರ್ ಕಪಿಲ್ ಶರ್ಮ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಮರಾಠಿ ಸುಂದರಿ ದೀಪಾಲಿ ಸಯಾದ್ ದೂರಿರುವುದರಲ್ಲಿ ಯಾವುದೇ ಹುರುಳೂ ಇಲ್ಲವಂತೆ. ಸ್ವತಃ ಕಪಿಲ್ ಶರ್ಮ ಖುದ್ದಾಗಿ ಈ ಮಾತು ಹೇಳಿದ್ದಾನೆ.

ನಾನು ಯಾವತ್ತೂ ದೀಪಾಲಿಯೊಂದಿಗೆ ಅನುಚಿತವಾಗಿ, ಅಸಭ್ಯವಾಗಿ ವರ್ತಿಸಿದ್ದಿಲ್ಲ. ದೀಪಾಲಿ ಅದೇಕೆ ಆ ರೀತಿ ಹೇಳಿದ್ದಾಳೋ ನನಗೆ ಗೊತ್ತಿಲ್ಲ ಎಂದು ಕಪಿಲ್ ಶರ್ಮ ಅಲವತ್ತುಕೊಂಡಿದ್ದಾನೆ. ಇತ್ತೀಚೆಗೆ ನಡೆದ ಮರಾಠಿ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಪಿಲ್ ಶರ್ಮ ನನ್ನ ಜತೆ ಅನುಚಿತವಾಗಿ ವರ್ತಿಸಿದ್ದಾನೆಂದು ನಟಿ ದೀಪಾಲಿ ಸಯಾದ್ ಹೇಳಿದಳು ಎಂಬುದಾಗಿ ಮಾಧ್ಯಮದಲ್ಲಿ ವರದಿಯಾಗಿತ್ತು. ಕಪಿಲ್ ಶರ್ಮ ಅನೇಕ ಹುಡುಗಿಯರೊಂದಿಗೆ ಅತ್ಯಂತ ನಿಕಟವಾಗಿರುತ್ತಾನೆ. ಅದೇ ರೀತಿ ನನ್ನ ಜತೆಯಲ್ಲೂ ವರ್ತಿಸಿ ನನ್ನೊಂದಿಗೆ ನೃತ್ಯ ಮಾಡಲು ಬಂದಿದ್ದ. ಆದರೆ, ನನಗದು ಇಷ್ಟವಾಗಲಿಲ್ಲ ಎಂದು ದೀಪಾಲಿ ಹೇಳಿಕೊಂಡಿದ್ದಾಳೆ.

Write A Comment