ಮನೋರಂಜನೆ

ಹಾಟ್‌ ಬೆಡಗಿ ನಿಖೀಶಾಳ “ಆಲೋನ್‌’ ಲೈಫ್

Pinterest LinkedIn Tumblr

nikithaನಿಖೀಶಾ ಪಟೇಲ್‌ ಎಂಬ ಮುದ್ದು ಮುಖದ ಹುಡುಗಿ ರವಿಚಂದ್ರನ್‌ ಅವರ ನರಸಿಂಹ ಚಿತ್ರಕ್ಕೆ ನಾಯಕಿಯಾಗಿ ಎಂಟ್ರಿಯಾದಾಗ ಕನ್ನಡಕ್ಕೆ ಮತ್ತೂಬ್ಬಳು ಮುದ್ದು ಮುಖದ ನಾಯಕಿ ಸಿಕ್ಕಳು ಎಂದು ಅನೇಕರು ಖುಷಿಯಾಗಿದ್ದರು. ಆದರೆ, ನಿಖೀಶಾಗೆ ಮಾತ್ರ ಕನ್ನಡದಿಂದ ಹೇಳಿಕೊಳ್ಳುವಂತಹ ಅವಕಾಶಗಳೇನು ಸಿಗಲಿಲ್ಲ. ಹಾಗಂತ ನಿಖೀಶಾ ಬೇಸರವಾಗದೇ ಸಿಕ್ಕ ಅವಕಾಶಗಳಲ್ಲೇ ಖುಷಿ ಕಾಣುತ್ತಾ ಬಂದರು. ವಿದೇಶಿ ಮೂಲದ ನಿಖೀಶಾಗೆ ಕೇವಲ ಕನ್ನಡವಷ್ಟೇ ಅಲ್ಲದೇ, ತೆಲುಗು ಹಾಗೂ ತಮಿಳು ಚಿತ್ರಗಳಲ್ಲೂ ನೆಲೆ ಯೂರುವ ಆಸೆ. ಹಾಗಾಗಿ, ಆ ಚಿತ್ರರಂಗದಲ್ಲೂ ಸಿಕ್ಕ ಅವಕಾಶಗಳನ್ನು ಮಿಸ್‌ ಮಾಡಿಕೊಳ್ಳದೇ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿರುತ್ತಾರೆ. ತೆಲುಗು ಚಿತ್ರ ಪುಲಿ ಮೂಲಕ ಎಂಟ್ರಿಕೊಟ್ಟಿರುವ ನಿಖೀಶಾ ಪಟೇಲ್‌ ಈಗಾಗಲೇ ಮೂರು ಭಾಷೆ ಸೇರಿ 11ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ನರಸಿಂಹ, ವರದನಾಯಕ, ನಮಸ್ತೆ ಮೇಡಂ ಚಿತ್ರಗಳಲ್ಲಿ ನಿಖೀಶಾ ನಟಿಸಿದ್ದು, ಆ ಚಿತ್ರಗಳಲ್ಲೂ ನಿಖೀಶಾ ಗಮನ ಸೆಳೆದಿದ್ದರು.

ಸದ್ಯ ನಿಖೀಶಾ ಪಟೇಲ್‌ ಆಲೋನ್‌ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಯಾವ ಆಲೋನ್‌  ಎಂದರೆ ನಿಖೀಶಾ ನಟಿಸಿರುವ ಹೊಸ ಸಿನೆಮಾ. ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಈಗಾಗಲೇ ಚಿತ್ರದ ಸ್ಟಿಲ್‌ಗ‌ಳು ಬಿಡುಗಡೆಯಾಗಿದ್ದು, ಸಖತ್‌ ಹಾಟ್‌ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆಗಳ ನಿದ್ದೆಗೆಡಿಸಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಮಂಗಳೂರಿನ ಬೀಚ್‌ ಪಕ್ಕದ ಮನೆಯೊಂದರಲ್ಲಿ ನಡೆದಿದೆ. ಇದೊಂದು ಹಾರರ್‌, ಸಸ್ಪೆನ್ಸ್‌ ಸಿನೆಮಾವಾಗಿದ್ದು, ಇಡೀ ಚಿತ್ರ ನಿಖೀಶಾ ಸುತ್ತವೇ ಸುತ್ತಲಿದೆಯಂತೆ. ಹಾಗಾಗಿ, ನಿಖೀಶಾ ಕೂಡಾ ಸಾಕಷ್ಟು ನಿರೀಕ್ಷೆಯೊಂದಿಗೆ ಆಲೋನ್‌ ಗೆ ಎದುರು ನೋಡುತ್ತಿದ್ದಾರೆ. ಒಂಟಿ ಮನೆಯೊಂದರಲ್ಲಿ ನಡೆಯುವ ಘಟನಾವಳಿಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದು, ನಿಖೀಶಾ ಪರ್‌    ಫಾರ್ಮೆನ್ಸ್‌ಗೆ ಅವಕಾಶವಿರುವ ಪಾತ್ರ ಸಿಕ್ಕಿದೆಯಂತೆ. ಅದು ಬಿಟ್ಟರೆ ನಿಖೀಶಾ ಯಾವುದೇ ಹೊಸ ಸಿನೆಮಾ ಒಪ್ಪಿಕೊಂಡಿಲ್ಲ. ನಿಧಾನವಾಗಿಯಾದರೂ ಒಳ್ಳೆಯ ಸಿನೆಮಾ ಮಾಡಬೇಕೆಂಬ ಆಸೆ ನಿಖೀಶಾಗಿದೆಯಂತೆ. ಮೊದಲೇ ಹೇಳಿದಂತೆ ನಿಖೀಶಾ ವಿದೇಶಿ ಮೂಲದವರಾದ್ದರಿಂದ ಅವರ ಪ್ರವಾಸ ಕೂಡಾ ಹೆಚ್ಚಿರುತ್ತದೆ. ಹೀಗಿರುವಾಗ ಒಪ್ಪಿಕೊಂಡ ಸಿನೆಮಾಗಳನ್ನು ಸರಿಯಾದ ಸಮಯಕ್ಕೆ ಮುಗಿಸಿಕೊಡದಿದ್ದರೆ ತೊಂದರೆಯಾಗುತ್ತದೆಂಬ ಕಾರಣಕ್ಕೆ ತನ್ನ ಶೆಡ್ನೂಲ್‌ ನೋಡಿಕೊಂಡು ನಿಖೀಶಾ ಸಿನೆಮಾ ಒಪ್ಪಿಕೊಳ್ಳುತ್ತಿದ್ದಾರೆ.
-ಉದಯವಾಣಿ

Write A Comment