ಮನೋರಂಜನೆ

ಬ್ಯಾಡ್ಮಿಂಟನ್‌: ಸೆಮಿಫೈನಲ್‌ಗೆ ಸೈನಾ ನೆಹ್ವಾಲ್

Pinterest LinkedIn Tumblr

Saina-Chinaಫುಜು, ಚೀನಾ (ಪಿಟಿಐ): ಹಾಲಿ ಚಾಂಪಿಯನ್‌ ಸೈನಾ ನೆಹ್ವಾಲ್ ಅವರು ಇಲ್ಲಿ ನಡೆಯುತ್ತಿರುವ ಚೀನಾ ಸೂಪರ್ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಶುಕ್ರವಾರ ಸೆಮಿಫೈನಲ್‌ ಸುತ್ತು ಪ್ರವೇಶಿಸಿದ್ದಾರೆ.

ಸೈನಾ  21–16, 21–13ರ ನೇರ ಗೇಮ್‌ಗಳಿಂದ ಜಪಾನಿನ ನೊಜೊಮಿ ಒಕುಹರಾ ಅವರನ್ನು ಮಣಿಸಿದರು.

ಅನುಭವಿ ಆಟಗಾರ್ತಿ ಸೈನಾ ಅವರಿಗೆ 42 ನಿಮಿಷಗಳ ಹೋರಾಟದಲ್ಲಿ ಎದುರಾಳಿ ನೊಜೊಮಿ ಯಾವುದೇ ಪ್ರತಿರೋಧ ಒಡ್ಡದೆ ಗೆಲುವು ಬಿಟ್ಟುಕೊಟ್ಟರು.

ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಹೈದರಾಬಾದ್‌ನ ಈ ಆಟಗಾರ್ತಿ ಮುಂದಿನ ಸುತ್ತಿನಲ್ಲಿ ಚೀನಾದ ಯಿಹಾನ್‌ ವಾಂಗ್ ಅವರ ಸವಾಲು ಎದುರಿಸಲಿದ್ದಾರೆ. 2011ರ ವಿಶ್ವ ಚಾಂಪಿಯನ್‌ ಹಾಗೂ 2012ರ ಲಂಡನ್‌ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ವಾಂಗ್ ಅವರ ಕೈಯಲ್ಲಿ ಸೈನಾ ಒಂಬತ್ತು ಬಾರಿ ಸೋಲು ಕಂಡಿದ್ದಾರೆ.

Write A Comment