ಅಂತರಾಷ್ಟ್ರೀಯ

ಗಂಟೆಗೊಮ್ಮೆ ಊಟ ಮಾಡುವ ಈ ಬಾಡಿ ಬಿಲ್ಡಿಂಗ್ ಸಾಧನೆಯ ಹಿಂದೆ ಒಂದು ದೊಡ್ಡ ಕಥೆಯೇ ಇದೆ….

Pinterest LinkedIn Tumblr

mortin

ಲಂಡನ್: ನಾವು ಹೆಚ್ಚೆಂದರೆ ದಿನಕ್ಕೆ 5 ಬಾರಿ ಇಲ್ಲ 6 ಬಾರಿ ಊಟ ಮಾಡುವವರನ್ನು ನೋಡಿದ್ದೇವೆ. ಆದರೆ ಇಂಗ್ಲೆಂಡಿನ ವ್ಯಕ್ತಿಯೊಬ್ಬ ಪ್ರತಿ ಗಂಟೆಗೆ ಒಂದು ಬಾರಿ ಊಟ ಮಾಡುತ್ತಾನಂತೆ.

ಇಂಗ್ಲೆಂಡಿನ ವೆಸ್ಟ್ ಮಿಡ್‍ಲ್ಯಾಂಡ್ಸ್‍ನಲ್ಲಿ ನೆಲೆಸಿರುವ ಮಾರ್ಟಿನ್ ಎಂಬ ಯುವಕ ಆತನ ಮೈಕಟ್ಟು ಮತ್ತು ಸ್ಟೈಲ್‍ನಿಂದಲೇ ಸಾಮಾಜಿಕ ಜಾಲತಣಗಳಲ್ಲಿ ಜನಪ್ರಿಯತೆ ಗಳಿಸಿದ್ದಾನೆ. 33 ವರ್ಷದ ಮಾರ್ಟಿನ್ ಫೋರ್ಡ್ ಯುವಕನಾಗಿದ್ದಾಗ 70 ಕೆಜಿ ತೂಕವಿದ್ದನಂತೆ. ಅದರೆ ಈಗ ಆತ ಬಾಡಿ ಬಿಲ್ಡಿಂಗ್ ಮಾಡಿ 146 ಕೆಜಿ ತೂಕ ಗಳಿಸಿದ್ದಾನೆ. ಈತನಿಗೆ ಇನ್‍ಸ್ಟಾಗ್ರಾಮ್‍ನಲ್ಲಿ ಈಗಾಗಲೇ 81 ಸಾವಿರ ಫಲೋವರ್ಸ್‍ಗಳಿದ್ದು ಫಿಟ್ ಆಗಲು ಈತನಿಂದ ಪ್ರೇರಣೆ ಪಡೆದಿದ್ದಾರೆ.

ವಿಶೇಷ ಎಂದರೆ ಮಾರ್ಟಿನ್ ಪ್ರತಿದಿನ ಗಂಟೆಗೊಂದು ಬಾರಿ ಊಟ ಮಡುತ್ತಾನೆ. ಈತನ ಒಂದು ತಿಂಗಳಿನ ಊಟಕ್ಕೆ 1 ಲಕ್ಷ ರೂ. ವೆಚ್ಚ ಮಾಡುತ್ತಿದ್ದಾನೆ. ಈತನ ಈ ಬಾಡಿ ಬಿಲ್ಡಿಂಗ್ ಸಾಧನೆಯ ಹಿಂದೆ ಒಂದು ದೊಡ್ಡ ಕಥೆಯೇ ಇದೆ. 19 ವರ್ಷವಿದ್ದಾಗ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಮಾರ್ಟಿನ್‍ಗೆ ಪೆಟ್ಟಾಗಿ ಕೆಲದಿನಗಳ ಕಾಲ ಹಾಸಿಗೆ ಹಿಡಿದಿದ್ದ. ಇದರಿಂದ 20 ಕೆಜಿ ತೂಕ ಕಳೆದುಕೊಂಡಿದ್ದ ಮಾರ್ಟಿನ್ ಖಿನ್ನತೆಗೆ ಜಾರಿದ್ದನಂತೆ. ಮತ್ತೆ ತೂಕ ಹೆಚ್ಚಿಸಲೆಂದು ಬಾಡಿ ಬಿಲ್ಡಿಂಗ್ ಶುರು ಮಾಡಿ ಬರಬರುತ್ತಾ ದೃಢ ಕಾಯವನ್ನು ತನ್ನದಾಗಿಸಿಕೊಂಡು ಇತರರಿಗೂ ಫಿಟ್ ಆಗಲು ಸ್ಫೂರ್ತಿಯಾಗಿದ್ದಾನೆ.

Write A Comment