ಮನೋರಂಜನೆ

ಹಜೇಲ್ ಕೀಚ್ ಜತೆ ಯುವರಾಜ್ ಮದುವೆ?

Pinterest LinkedIn Tumblr

yuvraj-hazel

ಮುಂಬೈ : ಸುರೇಶ್ ರೈನಾ, ಹರ್ಭಜನ್ ಸಿಂಗ್ ಮದುವೆಯಾದ ನಂತರ ಇದೀಗ ಯುವರಾಜ್ ಸಿಂಗ್ ಕೂಡಾ ಮದುವೆಗೆ ಸಿದ್ಧರಾಗಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

ಈಗಾಗಲೇ ಕ್ಯಾನ್ಸರ್‌ನ್ನು ಗೆದ್ದಿರುವ ಯುವರಾಜ್ ಸಿಂಗ್, ಮುಂದಿನ ವರ್ಷ ಬಾಲಿವುಡ್ ನಟಿ ಹಜೇಲ್ ಕೀಚ್‌ನ ಕೈ ಹಿಡಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಡಿಸೆಂಬರ್ 13ರಂದು 34 ನೇ ಹುಟ್ಟುಹಬ್ಬವನ್ನು ಆಚರಿಸಿದ ನಂತರ ಮದುವೆಯಾಗಬೇಕೆಂದು ಯುವಿ ಬಯಸಿದ್ದರಂತೆ. ಆದರೆ ಸಂಬಂಧಿಕರೊಬ್ಬರು ಮರಣಹೊಂದಿರುವುದರಿಂದ ಈ ವರ್ಷ ಮದುವೆಯಾಗಲು ಸಾಧ್ಯವಾಗುತ್ತಿಲ್ಲ ಎಂದು ಬಲ್ಲಮೂಲಗಳು ಹೇಳಿರುವುದಾಗಿ ವರದಿಯಾಗಿದೆ.

ಹಜೇಲ್ ಹಲವಾರು ಬಾರಿ ಯುವಿ ಜತೆಗೆ ಕಾಣಿಸಿಕೊಂಡದ್ದೂ ಇದೆ.

ಸಲ್ಮಾನ್ ಖಾನ್ ನಾಯಕನಾಗಿ ನಟಿಸಿದ ಬಾಡಿಗಾರ್ಡ್ ಚಿತ್ರದಲ್ಲಿ ಕರೀನಾ ಕಪೂರ್ ಳ ಗೆಳತಿಯಾಗಿ ಹಜೇಲ್ ನಟಿಸಿದ್ದಳು.

Write A Comment