ಇದ್ದಕ್ಕಿದ್ದಂತೆ ತಾಲಿವುಡ್ ಚಿತ್ರರಂಗದಿಂದ ವಿಶೇಷವಾದ ಸುದ್ದಿಯೊಂದು ಬಂದಿದೆ. ಈ ಸುದ್ದಿಯನ್ನೇ ನಂಬುವುದಾದರೆ ಬಾಲಿವುಡ್ನ ಚಿರಯೌವ್ವನೆ, ಹಸನ್ಮುಖಿ, ಮಹಾನ್ ನೃತ್ಯಗಾರ್ತಿ ಮಾಧುರಿ ದೀಕ್ಷಿತ್, ಅನುಷ್ಕಾ ಶೆಟ್ಟಿಯ ಅಕ್ಕನಂತೆ! ಇದೇನಪ್ಪಾ ಅಂತಾ ಹುಬ್ಬೇರಿಸ್ತೀರಾ…. ಹಾಗೇನಿಲ್ಲ. ತೆಲುಗಿನ ಜಗದ್ವಿಖ್ಯಾತ ಸ್ಟಾರ್ ನಿರ್ದೇಶಕ, ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ ಎಂಬ ಐತಿಹಾಸಿಕ ಚಿತ್ರ ಇಡೀ ಚಿತ್ರರಂಗದಲ್ಲಿ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಈಗ ಹೊಸ ವಿಷಯ ಬಾಹುಬಲಿ ಭಾಗ-2 ತಯಾರಿಕೆಗೆ ಸಕಲ ಸಿದ್ಧತೆಗಳು ನಡೆದಿದ್ದು, ಶೀಘ್ರವೇ ಬಾಹುಬಲಿ-2ರ ತಯಾರಿಕಾ ಪಟ್ಟಿಯು ಆರಂಭವಾಗಲಿದೆಯಂತೆ.
ರಾಜಮೌಳಿ ಅವರು ಈಗಾಗಲೇ ಚಿತ್ರ ನಿರ್ಮಾಣದ ಸಿದ್ಧತೆಯಲ್ಲಿ ತೊಡಗಿದ್ದಾರಂತೆ.
ಈ ಚಿತ್ರದ ಅಂದರೆ, ಬಾಹುಬಲಿ-2ರಲ್ಲಿ ಬಾಲಿವುಡ್ನ ಸುಂದರ ನಟಿ ಮಾಧುರಿ ದೀಕ್ಷಿತ್ ಅನುಷ್ಕಾ ಶೆಟ್ಟಿಯ ಅಕ್ಕನಾಗಿ ನಟಿಸಲಿದ್ದಾಳಂತೆ. ಅದಕ್ಕಾಗಿ ರಾಜಮೌಳಿ ಮಾಧುರಿ ಜೊತೆ ಮಾತುಕತೆ ನಡೆಸಿದ್ದು, ಮಾಧುರಿ ಓಕೆ ಕೂಡ ಮಾಡಿದ್ದಾಳಂತೆ.ಹಾಗಾಗಿ, ಬಾಹುಬಲಿ-2ರ ನಿರೀಕ್ಷೆಯಲ್ಲಿರುವ ಅಭಿಮಾನಿ ಪ್ರೇಕ್ಷಕರಿಗೆ ಮಾಧುರಿ, ಅನುಷ್ಕಾ ಶೆಟ್ಟಿಯ ಅಕ್ಕನಾಗಿ ಚಿತ್ರದಲ್ಲಿ ದರ್ಶನ ನೀಡಲಿದ್ದಾಳಂತೆ.