ಬೆಂಗಳೂರು,ನ.2- ಜಗದ್ಗುರು ಶ್ರೀ ರೇವಣ್ಣಸಿದ್ದೇಶ್ವರ ಮಹಾಮಠವು ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ ಅಂಗವಾಗಿ ನೀಡುವ ಕನಕ ಪ್ರಶಸ್ತಿಗೆ ಕನ್ನಡ ವಿವಿ ಕುಲಪತಿ ಡಾ.ಮಲ್ಲಿಕಾ ಘಂಟಿ ಸೇರಿದಂತೆ 6 ಮಂದಿ ಆಯ್ಕೆಯಾಗಿದ್ದಾರೆ. ಸಾಹಿತ್ಯ ಕ್ಷೇತ್ರದಿಂದ ಕನ್ನಡ ವಿವಿ ಕುಲಪತಿ ಡಾ.ಮಲ್ಲಿಕಾ ಘಂಟಿ, ಬಾಗಲಕೋಟೆಯ ಡಾ.ಸತ್ಯಾನಂದ ಪಾತ್ರೋಟೆ, ಶಿಕ್ಷಣ ಹಾಗೂ ಆಡಳಿತ-ಧಾರವಾಡ ಕೃಷಿ ವಿವಿ ಕುಲಪತಿ ಡಾ.ಡಿ.ಪಿ.ಬಿರಾದಾರ, ದಾಸ ಸಾಹಿತ್ಯ-ವಿಜಯಪುರದ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ-ಮಾಜಿ ಸಂಸದ ಎಚ್.ವಿಶ್ವನಾಥ್, ಪರಿವರ್ತನಾ-ಬಾಲ್ಕಿಯ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗಪಟ್ಟ ದೇವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಹಕಾರ-ಕಂಬಳಿ ತಯಾರಿಕೆಗಾಗಿ ರಾಮದುರ್ಗ ತಾಲ್ಲೂಕು ಸಾಲಾಪುರದ ಕುರಿ ಸಂಗೋಪನಾ ಉಣ್ಣೆಯ ಉತ್ಪಾದಕ ಸಹಕಾರ ಸಂಘ ನಿಯಮಿತ, ಚಳುವಳಿ ಕ್ಷೇತ್ರ-ಕಲಬುರಗಿಯ ಮಾಜಿ ಸಚಿವ ಎಸ್.ಕೆ.ಕಾಂತ, ಹಾಲು ಮತ ಸಂಸ್ಕೃತಿ ಚಿಂತನ ಅಧ್ಯಯನ-ಡಾ.
ಎಫ್.ಟಿ.ಹಳ್ಳಿಕೇರಿ, ಕೃಷಿ- ನರಗುಂದದ ಸಿದ್ಧಪ್ಪ ಹುಲಜೋಗಿ, ಶೌರ್ಯ ಮರಣೋತ್ತರ -ರಾಮನಗರ ಜಿಲ್ಲೆ ಮಲ್ಲಾಪುರದ ಪಿಎಸ್ಐ ಜಗದೀಶ್ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ.
ಇದೇ ತಿಂಗಳ 26ರಿಂದ 30ರವರೆಗೆ ನಡೆಯುವ ಕನಕ ಪಂಚಮಿ ಸಾಂಸ್ಕೃತಿಕ ಉತ್ಸವದ ಅಂಗವಾಗಿ ನ.30ರಂದು ಧಾರವಾಡದ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಮುದಾಯ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಹಾಮಠ ಪ್ರಕಟಣೆಯಲ್ಲಿ
ತಿಳಿಸಿದೆ.