ನವದೆಹಲಿ: ರಣಜಿ ಟ್ರೋಫಿ ಪಂದ್ಯದಲ್ಲಿ ಗೌತಮ್ ಗಂಭೀರ್ ಜತೆ ಜಗಳಕ್ಕೆ ಇಳಿದಿದ್ದ ಬಂಗಾಳದ ನಾಯಕ ಮನೋಜ್ ತಿವಾರಿ, ದೆಹಲಿಯ ನಾಯಕ ಗಂಭೀರ್ ಭಾರತದ ಮಾಜಿ ನಾಯಕ ಗಂಗೂಲಿ ಮತ್ತು ಬಂಗಾಳಿಗಳ ವಿರುದ್ಧ ಜನಾಂಗೀಯ ನಿಂದನೆಯ ಪ್ರತಿಕ್ರಿಯೆ ನೀಡಿದ್ದಾರೆಂದು ಹೇಳಿದ್ದಾರೆ. ಸೌರವ್ ಗಂಗೂಲಿಗೆ ಈ ವಿಷಯ ತಿಳಿಸಿದಾಗ ಅವರು ತಮ್ಮ ಹೆಸರನ್ನು ಈ ವಿವಾದದಲ್ಲಿ ಎಳೆದುತಂದಿದ್ದಕ್ಕೆ ಬೇಸರಗೊಂಡರು.
ಸೌರವ್ ಗಂಗೂಲಿ ವಿರುದ್ಧ ಯಾವುದೇ ಮಾತನ್ನು ನಾವು ಸಹಿಸುವುದಿಲ್ಲ ಎಂದು ತಿವಾರಿ ಹೇಳಿದರು. ಗೌತಮ್ ಗಂಭೀರ್ ನಿಜ ಹೇಳುತ್ತಿಲ್ಲ. ಗಂಭೀರ್ ಹೇಳಿದ್ದನ್ನು ನಾನು ಮಾಡಿದ್ದರೆ ನನಗೆ ಶೇ. 40 ಮತ್ತು ಅವರಿಗೆ ಶೇ. 70ರಷ್ಟು ದಂಡ ಏಕೆ ವಿಧಿಸುತ್ತಿದ್ದರು ಎಂದು ಬಂಗಾಳ ಕ್ರಿಕೆಟರ್ ಪ್ರಶ್ನಿಸಿದ್ದಾರೆ.
ದೆಹಲಿ ಮತ್ತು ಬಂಗಾಳ ನಡುವೆ ರಣಜಿ ಟ್ರೋಫಿ ಪಂದ್ಯದ 3ನೇ ದಿನ ಗಂಭೀರ್ ಮತ್ತು ತಿವಾರಿ ಕೈಕೈ ಮಿಲಾಯಿಸುವ ಹಂತ ತಲುಪಿದ್ದರು. ದಿನದಾಟ ಮುಗಿದ ಕೂಡಲೇ ಮ್ಯಾಚ್ ರೆಫರಿ ವಾಲ್ಮಿಕ್ ಬುಚ್ ವಿಚಾರಣೆಗೆ ಕರೆಸಿದರು. ಬಿಸಿಸಿಐಗೆ ವಿಸ್ತೃತ ವರದಿ ನೀಡಿದ್ದು, ಶಿಕ್ಷೆಯ ಪ್ರಮಾಣ ಅವರು ನಿರ್ಧರಿಸುತ್ತಾರೆ ಎಂದು ಹೇಳಿದ್ದರು.