ಮನೋರಂಜನೆ

‘ಲಗಾನ್ 2’ನಲ್ಲಿ ಆಮಿರ್ ಖಾನ್ ನಟಿಸುವುದಿಲ್ಲವಂತೆ!!

Pinterest LinkedIn Tumblr

Bollywood actor Aamir Khan poses during the launch of a new poster for his upcoming film 'PK' in Mumbai on August 20, 2014. The upcoming comedy-drama, directed by Rajkumar Hirani, is scheduled for release this December 19. AFP PHOTO/ PUNIT PARANJPE

ಸಣ್ಣ ಸುಳಿವು ಸಿಕ್ಕರೂ ಸಂಪೂರ್ಣ ಮಾಹಿತಿ ಹೊರತೆಗೆಯುವಲ್ಲಿ ಗಾಸಿಪ್​ಪ್ರಿಯರದ್ದು ಎತ್ತಿದ ಕೈ. ಇದೀಗ ಅವರ ಕಣ್ಣಿಗೆ ಬಿದ್ದಿರುವುದು ‘ಲಗಾನ್’ ಚಿತ್ರದ ವಿಚಾರ. ಅಯ್ಯೋ… ಅದು ಹಳೇ ಸಿನಿಮಾ ಅಲ್ವಾ ಅಂತ ಗೊಣಗುವಂತಿಲ್ಲ. ಯಾಕೆಂದರೆ, ನಾವಿಲ್ಲಿ ಹೇಳುತ್ತಿರುವುದು ಆ ಚಿತ್ರದ ಮುಂದಿನ ಸರಣಿಯ ಸುದ್ದಿ. ಹೌದು, ಬಾಲಿವುಡ್​ನಲ್ಲಿ ‘ಲಗಾನ್ 2’ ಚಿತ್ರಕ್ಕೆ ತಯಾರಿ ಶುರುವಾಗಿದೆಯಂತೆ. ಯಾರೆಲ್ಲ ನಟಿಸುತ್ತಾರೆ? ಯಾರು ಆಕ್ಷನ್-ಕಟ್ ಹೇಳುತ್ತಾರೆ? ಸಂಗೀತ ಯಾರದ್ದು? ಈ ಯಾವ ಪ್ರಶ್ನೆಗಳಿಗೂ ಸದ್ಯಕ್ಕೆ ಉತ್ತರವಿಲ್ಲ. ಆದರೆ ಅಚ್ಚರಿಯ ವಿಷಯವೇನೆಂದರೆ, ‘ಲಗಾನ್ 2’ನಲ್ಲಿ ಆಮಿರ್ ಖಾನ್ ನಟಿಸುವುದಿಲ್ಲವಂತೆ!!

2001ರಲ್ಲಿ ತೆರೆಕಂಡ ‘ಲಗಾನ್’ ಚಿತ್ರದಲ್ಲಿ ನಾಯಕ/ ನಿರ್ವಪಕನಾಗಿ ಆಮಿರ್ ಮಿಂಚು ಹರಿಸಿದ್ದರು. ಆದರೆ ‘ಲಗಾನ್ 2’ನಲ್ಲಿ ಆಮಿರ್ ಬಣ್ಣ ಹಚ್ಚುವುದು ಅನುಮಾನ ಎಂಬ ಮಾತು ಕೇಳಿಬರುತ್ತಿದೆ. ನಟಿಸದಿದ್ದರೇನಂತೆ, ನಿರ್ವಣದ ಜವಾಬ್ದಾರಿಯನ್ನು ಅವರೇ ಹೊತ್ತುಕೊಳ್ಳುತ್ತಾರೆ ಹಾಗೂ ಹೊಸ ಕಲಾವಿದರು ಮತ್ತು ತಂತ್ರಜ್ಞರಿಗೆ ಆ ಚಿತ್ರದಲ್ಲಿ ಚಾನ್ಸ್ ನೀಡುತ್ತಾರೆ ಎನ್ನುತ್ತಿವೆ ಮೂಲಗಳು. ಆದರೆ ಈ ಬಗ್ಗೆ ಸ್ವತಃ ಆಮಿರ್ ಎಲ್ಲಿಯೂ ಬಾಯಿಬಿಟ್ಟಿಲ್ಲ. ಸದ್ಯದ ಮಾಹಿತಿ ಪ್ರಕಾರ, ಪ್ರಾಚಿ ದೇಸಾಯಿ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ.

Write A Comment