ಬಾಲಿ: ಭೂಗತವಾಗಿದ್ದುಕೊಂಡೆ ದೇಶದಲ್ಲಿ ವಿಧ್ವಂಸಕ ಕೃತ್ಯ, ಉದ್ಯಮಿಗಳಿಗೆ, ಬಾಲಿವುಡ್ ಮಂದಿಗೆ ಬೆದರಿಕೆ ಕರೆ ಮಾಡುತ್ತಿದ್ದ ಭೂಗತ ಪಾತಕಿ ಛೋಟಾ ರಾಜನ್ ಇಂಡೋನೇಷ್ಯಾ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ನಿನ್ನೆ ಆಸ್ಟ್ರೇಲಿಯಾದ ಸಿಡ್ನಿಯಿಂದ ಬಾಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ವೇಳೆ ರಾಜನ್‍ನನ್ನು ಇಂಡೋನೇಷ್ಯಾದ ಅಧಿಕಾರಿಗಳು ಬಂಧಿಸಿದ್ದಾರೆ.
55 ವರ್ಷದ ಛೋಟಾ ರಾಜೇಂದ್ರ ಸದಾಶಿವ್ ನಿಕ್ಲಾಜೆ ಅಲಿಯಾಸ್ ಛೋಟಾ ರಾಜನ್ ಕಳೆದ ಎರಡು ದಶಕಗಳಿಂದ ಭೂಗತವಾಗಿಯೇ ತನ್ನ ಕೆಲಸ ಮಾಡಿಕೊಂಡಿದ್ದ. ಒಂದು ಕಾಲದಲ್ಲಿ ಭೂಗತ ಪಾತಕಿ ದಾವುದ್ ಇಬ್ರಾಹಿಂ ಆಪ್ತನಾಗಿದ್ದ ಛೋಟಾ ರಾಜನ್ ಭಾರತದಲ್ಲಿ ನಡೆದ 15 -20 ಕೊಲೆ ಪ್ರಕರಣದ ಸೂತ್ರಧಾರ ಎಂದು ಹೇಳಲಾಗುತ್ತಿದೆ.
ಆಸ್ಟ್ರೇಲಿಯಾ ಪೊಲೀಸರ ನೀಡಿದ ಖಚಿತ ಮಾಹಿತಿ ಮೇರೆಗೆ ನಿನ್ನೆ ಇಂಡೋನೇಷ್ಯಾ ಪೊಲೀಸರು ಬಂಧಿಸಿದ್ದಾರೆ.
