ವಿಶ್ವ ವಿಖ್ಯಾತ ಪಾಪ್ ಗಾಯಕಿ ಅಮೆರಿಕದ ಬ್ರಿಟ್ನಿ ಸ್ಪಿಯರ್ಸ್’ರ ಮ್ಯೂಸಿಕ್ ಶೋವೆಂದರೆ ಜನಸಾಗರವೇ ಹರಿದು ಬರುತ್ತದೆ.
ಅಂತಹ ಕಾರ್ಯಕ್ರವೊಂದು ಇತ್ತೀಚೆಗೆ ಅಮೆರಿಕದ ಲಾಸ್ ವೇಗಸ್’ನಲ್ಲಿ ನಡೆದಿದೆ. ಆದರೆ ಈ ಶೋನಲ್ಲಿ ಗಾಯಕಿ ಬ್ರಿಟ್ನಿ ಸ್ಪಿಯರ್ಸ್’ರ ಉಡುಪಿನ ಝಿಪ್ ಕಳಚಿದರ ಪರಿಣಾಮ ಗೀತೆಯೊಂದಿಗೆ ಪ್ರೇಕ್ಷಕರಿಗೆ ಬಿಟ್ಟಿ ಮನರಂಜನೆ ದೊರೆಯುವಂತಾಯಿತು.
ಪಾಪ್ ಗಾಯನದ ಮೂಲಕ ನೃತ್ಯದೊಂದಿಗೆ ಶೋ ನಡೆಸುತ್ತಿದ್ದ ಬ್ರಿಟ್ನಿ ಉಡುಪಿನ ಹಿಂಬದಿ ಝಿಪ್ ಒಪನ್ ಆಗಿದೆ. ಇದನ್ನರಿತ ಗಾಯಕಿ, ಸಹ ಕಲಾವಿದರಿಗೆ ಉಡುಪನ್ನು ಸರಿ ಮಾಡುವಂತೆ ಸೂಚಿಸಿದ್ದಾರೆ.
ಆದರೆ ಶೋ ನಡುವೆ ಝಿಪ್ ಹಾಕಲು ಪಾಡುಪಟ್ಟ ಸಹನರ್ತಕರು ಉಡುಪನ್ನು ಸರಿಪಡಿಸಲಾಗದೇ ಕೈಚೆಲ್ಲಿದ್ದಾರೆ. ಆದರೂ ಒಪನ್ ಝಿಪ್’ನೊಂದಿಗೆ ಶೋವನ್ನು ಸಂಪೂರ್ಣವನ್ನು ಪೂರೈಸಿರುವ ಬ್ರಿಟ್ನಿಯ ಈ ವೀಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗ್ಬಿಟ್ಟಿದೆ.
*ಕಪ್ಪು ಮೂಗುತ್ತಿ
-ಉದಯವಾಣಿ,