ಉಗ್ರಂ ಚಿತ್ರದ ಯಶಸ್ಸಿನ ನಂತರ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯಿಸಿರುವ ‘ರಥಾವರ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಈ ಹಿಂದೆ ಫಸ್ಟ್ ಲುಕ್ ಮೂಲಕ ಪ್ರೇಕ್ಷಕರ ಕಾತುರತೆ ಹೆಚ್ಚಿಸಿದ್ದ ಉಗ್ರಂ ಮುರಳಿ ಅಂಡ್ ಟೀಂ ಈ ಭಾರಿ ಟೀಸರ್ ಮೂಲಕ ಸ್ವಲ್ಪ ಜಾಸ್ತಿನೇ ಸೌಂಡ್ ಮಾಡಿದ್ದಾರೆ.
”ಕೇಸ್ ಮಾಡೋದು ದೊಡ್ಡ ವಿಷ್ಯ ಅಲ್ಲ. ಮಾಡಿದ್ರೆ ಇಂತಹ ಕೇಸ್ ಇದ್ಯಾ ಅಂತ ಲಾಯರ್’ಗಳು ತಡಕಾಡ್ಬೇಕು, ಪೊಲೀಸ್ ನವರು ಹುಡುಕಾಡ್ಬೇಕು.” ಅನ್ನೊ ಪಂಚಿಂಗ್ ಡೈಲಾಗಿನ ಟೀಸರ್ ಈ ಚಿತ್ರವು ಪಕ್ಕಾ ಆ್ಯಕ್ಷನ್ ಮೂವಿ ಅನ್ನುವುದಕ್ಕೆ ಸಾಕ್ಷಿ ಎಂಬಂತಿದೆ.
ಉಗ್ರಂ ಚಿತ್ರದಲ್ಲಿ ಖಡಕ್ ಖದರ್ ತೋರಿಸಿದ ಶ್ರೀಮುರಳಿ ಈ ಚಿತ್ರದಲ್ಲಿ ಡಿಂಪಲ್ ಹುಡ್ಗಿ ರಚಿತಾ ರಾಮ್’ರೊಂದಿಗೆ ರೋಮ್ಯಾನ್ಸ್ ಮಾಡಲಿದ್ದಾರೆ. ರಥಾವರ ಚಿತ್ರಕ್ಕೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಆ್ಯಕ್ಷನ್ ಕಟ್ ಹೇಳಿದ್ದಾರೆ.
*ಕಪ್ಪು ಮೂಗುತ್ತಿ
-ಉದಯವಾಣಿ