ಚೆನ್ನೈ, ಅ.23: ರನ್ ಬರ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ ದಾಖಲಿಸಿದ ಶತಕ ನೆರವಿನಲ್ಲಿ ಭಾರತ ತಂಡ ಗುರುವಾರ ದಕ್ಷಿಣ ಆಫ್ರಿಕ ವಿರುದ್ಧ 35 ರನ್‌ಗಳ ಜಯ ಗಳಿಸಿದೆ.
ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 300 ರನ್‌ಗಳ ಸವಾಲನ್ನು ಪಡೆದ ದಕ್ಷಿಣ ಆಫ್ರಿಕ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 264 ರನ್ ಗಳಿಸಲಷ್ಟೇ ಶಕ್ತವಾಯಿತು.
ನಾಯಕ ಎಬಿಡಿವಿಲಿಯರ್ಸ್ ಶತಕ ದಾಖಲಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಈ ಗೆಲುವಿನೊಂದಿಗೆ ಭಾರತ ಐದು ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸಿದೆ.
ಭಾರತದ ಬೌಲರ್‌ಗಳ ಸಂಘಟಿತ ಪ್ರಯತ್ನ ಫಲ ನೀಡಿತು. ಅದರಲ್ಲೂ ಮುಖ್ಯವಾಗಿ ಹರ್ಭಜನ್ ಸಿಂಗ್(50ಕ್ಕೆ 2), ಅಕ್ಷರ್ ಪಟೇಲ್(40ಕ್ಕೆ 1), ಅಮಿತ್ ಮಿಶ್ರಾ(55ಕ್ಕೆ 1) ಪರಿಸ್ಥಿತಿಯ ಲಾಭ ಪಡೆದುಕೊಂಡು ಆಫ್ರಿಕವನ್ನು ಕಟ್ಟಿ ಹಾಕಿದರು.
ಡಿವಿಲಿಯರ್ಸ್ 98 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ ಶತಕ ತಲುಪಿದರು. ಇದು ಅವರ 22ನೆ ಶತಕವಾಗಿದೆ. 128 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಡಿವಿಲಿಯರ್ಸ್ 107 ಎಸೆತಗಳನ್ನು ಎದುರಿಸಿದರು. 10 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 112 ರನ್ ಗಳಿಸಿದರು. 44.3ನೆ ಓವರ್‌ನಲ್ಲಿ ಭುವನೇಶ್ವರ ಕುಮಾರ್ ಎಸೆದ ಬೌನ್ಸರ್‌ನ್ನು ಕೆಣಕಲು ಹೋಗಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಗೆ ಕ್ಯಾಚ್ ನೀಡಿದರು.
ಡಿವಿಲಿಯರ್ಸ್ ನಿರ್ಗಮನದ ಬಳಿಕ ಭಾರತ ಮೇಲುಗೈ ಸಾಧಿಸಿತು. ಆಫ್ರಿಕದ ಇನಿಂಗ್ಸ್ ಆರಂಭದಲ್ಲಿ ಆರಂಭಿಕ ದಾಂಡಿಗ ಹಾಶಿಂ ಅಮ್ಲ(7) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಹರ್ಭಜನ್ ಸಿಂಗ್ ತನ್ನ ಮೊದಲ 6 ಓವರ್‌ಗಳಲ್ಲಿ ಅಪಾಯಕಾರಿಯಾಗಿ ಕಾಣಿಸಿಕೊಂಡರು. ಅವರು 10 ಓವರ್‌ಗಳಲ್ಲಿ 50 ರನ್‌ಗೆ 2 ವಿಕೆಟ್ ಪಡೆದರು.ಕ್ವಿಂಟನ್ ಡಿ ಕಾಕ್ ಅವರು 53 ನಿಮಿಷಗಳ ಬ್ಯಾಟಿಂಗ್‌ನಲ್ಲಿ 35 ಎಸೆತಗಳನ್ನು ಎದುರಿಸಿ 6 ಬೌಂಡರಿ ಮತ್ತು 1ಸಿಕ್ಸರ್ ಇರುವ 43 ರನ್ ಗಳಿಸಿ ಹರ್ಭಜನ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು.
ಡಿ ಕಾಕ್ ನಿರ್ಗಮನದ ಬಳಿಕ ಎಫ್‌ಡು ಪ್ಲೆಸಿಸ್ (17) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಧೋನಿಗೆ ಕ್ಯಾಚ್ ನೀಡಿದರು. 14.4 ಓವರ್‌ಗಳಲ್ಲಿ 79ಕ್ಕೆ 3 ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕ 17.6 ಓವರ್‌ಗಳಲ್ಲಿ ಸ್ಕೋರ್‌ನ್ನು 88ಕ್ಕೆ ತಲುಪಿಸುವ ಹೊತ್ತಿಗೆ ಇನ್ನೊಂದು ವಿಕೆಟ್ ಕಳೆದುಕೊಂಡಿತು. ಡೇವಿಡ್ ಮಿಲ್ಲರ್(6) ಅವರನ್ನು ಹರ್ಭಜನ್ ಸಿಂಗ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.ಐದನೆ ವಿಕೆಟ್‌ಗೆ ಫರ್ಹಾನ್ ಬೆರ್ಹರ್ದೀನ್ ಮತ್ತು ಡಿವಿಲಿಯರ್ಸ್ 56 ರನ್‌ಗಳ ಜೊತೆಯಾಟ ನೀಡಿದರು. 32ನೆ ಓವರ್‌ನಲ್ಲಿ ಮಿಶ್ರಾ ಆಫ್ರಿಕ ತಂಡಕ್ಕೆ ರನ್ ನೀಡದೆ ಸತಾಯಿಸಿದರು. 31.5ನೆ ಓವರ್‌ನಲ್ಲಿ ಫರ್ಹಾನ್ ಬೆಹರ್ದೀನ್ ವಿಕೆಟ್ ಕಬಳಿಸಿದರು.
ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತ ತನ್ನ ನೆಚ್ಚಿನ ತಾಣವಾಗಿರುವ ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನಾಗಿ ಆಡಿತು. 235 ನಿಮಿಷಗಳ ಬ್ಯಾಟಿಂಗ್‌ನಲ್ಲಿ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 299 ರನ್ ಗಳಿಸಿತು.
ಕೊಹ್ಲಿ ಅವರದ್ದು ಇದು 23ನೆ ಏಕದಿನ ಶತಕ. ಕಳೆದ ವಿಶ್ವಕಪ್ ಬಳಿಕ ಕೊಹ್ಲಿ ಮೊದಲ ಶತಕ ದಾಖಲಿಸಿದ್ದಾರೆ. 202 ನಿಮಿಷಗಳ ಬ್ಯಾಟಿಂಗ್‌ನಲ್ಲಿ ಕೊಹ್ಲಿ 138 ರನ್(202ನಿ, 140ಎ, 6ಬೌ,5ಸಿ) ಗಳಿಸಿದರು.
7.5 ಓವರ್‌ಗಳಲ್ಲಿ 35ಕ್ಕೆ 2 ವಿಕೆಟ್ ಕಳೆದುಕೊಂಡ ನಂತರ ರಹಾನೆ ಮತ್ತು ಕೊಹ್ಲಿ ಜೊತೆಯಾಗಿ ಭಾರತದ ಖಾತೆಗೆ 3ನೆ ವಿಕೆಟ್‌ಗೆ 104 ರನ್ ಸೇರಿಸಿದರು. ರಹಾನೆ 45ರನ್(53ಎ, 4ಬೌ) ಗಳಿಸಿದರು.
ರಹಾನೆ ನಿರ್ಗಮನದ ಬಳಿಕ ಕೊಹ್ಲಿಗೆ ರೈನಾ ಜೊತೆಯಾದರು. ಇವರು 4ನೆ ವಿಕೆಟ್‌ಗೆ ಜೊತೆಯಾಟದಲ್ಲಿ 127 ರನ್ ಸೇರಿಸಿದರು. ನಾಯಕ ಧೋನಿ 15 ರನ್ ಮತ್ತು ರೋಹಿತ್ ಶರ್ಮ 21 ರನ್ ಗಳಿಸಿ ಸ್ಕೋರ್‌ನ್ನು 299ಕ್ಕೆ ತಲುಪಿಸಲು ನೆರವಾದರು. ಭಾರತದ ಪರ ಗರಿಷ್ಠ ಸ್ಕೋರ್ ದಾಖಲಿಸಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.
………..
ನಂಬರ್ಸ್ ಗೇಮ್
*23: ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಶತಕಗಳ ಸಂಖ್ಯೆಯನ್ನು 23ಕ್ಕೆ ಏರಿಸಿದರು.ಸಚಿನ್ ತೆಮಡುಲ್ಕರ್(49) , ರಿಕಿ ಪಾಂಟಿಂಗ್(30), ಸನತ್ ಜಯಸೂರ್ಯ(28) ಮತ್ತು ಕುಮಾರ್ ಸಂಗಕ್ಕರ (25) ಇವರ ಬಳಿಕ ಕೊಹ್ಲಿ ಗರಿಷ್ಠ ಶತಕಗಳ ಸಾಧನೆ ಮಾಡಿದ್ದಾರೆ. ನಂ.3 ಕ್ರಮಾಂಕದಲ್ಲಿ ಕೊಹ್ಲಿ 16 ಶತಕ ಗಳಿಸಿದ್ದಾರೆ. ಆದರೆ ಇದೇ ಕ್ರಮಾಂಕದಲ್ಲಿ ಪಾಂಟಿಂಗ್ 29 ಮತ್ತು ಸಂಗಕ್ಕರ 18 ಶತಕ ದಾಖಲಿಸಿದ್ದರು.
*1: ಆಫ್ರಿಕ ವಿರುದ್ಧ ಕೊಹ್ಲಿ ಮೊದಲ ಶತಕ ದಾಖಲಿಸಿದ್ದಾರೆ. *22: ದಕ್ಷಿಣ ಆಫ್ರಿಕದ ಎಬಿ ಡಿವಿಲಿಯರ್ಸ್ 22ನೆ ಶತಕ ದಾಖಲಿಸಿದರು. 21 ಶತಕ ಶತಕ ದಾಖಲಿಸಿದ ಅಮ್ಲ ದಾಖಲೆ ಮುರಿದರು.
*76.71: ಎಬಿಡಿಲಿಯರ್ಸ್ 2015ನೆ ಸಾಲಿನಲ್ಲಿ 76.71 ಸರಾಸರಿ ಹೊಂದಿದ್ದಾರೆ.
*4-145: ಭಾರತದ ಮೂವರು ಸ್ಪಿನ್ನರ್‌ಗಳು 30ಓವರ್‌ಗಳಲ್ಲಿ 145 ರನ್ ಬಿಟ್ಟುಕೊಟ್ಟರು.
*3-54: ಕಾಗಿಸೊ ರಬಾಡ 54ಕ್ಕೆ 3 ವಿಕೆಟ್ ಸಂಪಾದಿಸಿದರು.
,,,,,,,,,,,,
ಸ್ಕೋರ್ ಪಟ್ಟಿ
ಭಾರತ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 299
ರೋಹಿತ್ ಶರ್ಮ ಸಿ ಪ್ಲೆಸಿಸ್ ಬಿ ಮೊರೀಸ್ 21
ಧವನ್ ಸಿ ಕ್ವಿಂಟನ್ ಬಿ ರಬಾಡ 07
ಕೊಹ್ಲಿ ಸಿ ಕ್ವಿಂಟನ್ ಬಿ ರಬಾಡ138
ಅಜಿಂಕ್ಯ ರಹಾನೆ ಸಿ ಕ್ವಿಂಟನ್ ಬಿ ಸ್ಟೇಯ್ನಿ45
ಸುರೇಶ್ ರೈನಾ ಸಿ ಡಿವಿಲಿಯರ್ಸ್ ಬಿ ಸ್ಟೇಯ್ನ್ 53
ಎಂಎಸ್ ಧೋನಿ ಸಿ ಡಿವಿಲಿಯರ್ಸ್ ಬಿ ಸ್ಟೇಯ್ನ್ 15
ಹರ್ಭಜನ್ ಸಿಂಗ್ ಬಿ ರಬಾಡ 00
ಅಕ್ಷರ್ ಪಟೇಲ್ ಔಟಾಗದೆ 04
ಭುವನೇಶ್ವರ ಕುಮಾರ್ ರನೌಟ್(ಸ್ಟೇಯ್ನ)00
ಇತರೆ16
ವಿಕೆಟ್ ಪತನ: 1-28, 2-35, 3-139, 4-266, 5-291, 6-291, 7-299, 8-299
ಬೌಲಿಂಗ್ ವಿವರ
ಡೇಲ್ ಸ್ಟೇಯ್ನ10-0-61-3
ರಬಾಡ 10-0-54-3
ಕ್ರಿಸ್ ಮೊರೀಸ್ 09-0-55-1
ಫ್ಯಾಂಗಿಸೊ09-0-51-0
ಇಮ್ರಾನ್ ತಾಹಿರ್09-0-58-0
ಬೆಹರ್ದೀನ್03-0-17-0
ದಕ್ಷಿಣ ಆಫ್ರಿಕ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 264
ಕ್ವಿಂಟನ್ ಡೆ ಕಾಕ್ ಸಿ ರಹಾನೆ ಬಿ ಹರ್ಭಜನ್43
ಹಾಶಿಂ ಅಮ್ಲ ಸಿ ಧವನ್ ಬಿ ಮೋಹಿತ್07
ಎಫ್‌ಡು ಪ್ಲೆಸಿಸ್ ಸಿ ಧೋನಿ ಬಿ ಪಟೇಲ್17
ಎಬಿಡಿವಿಲಿಯರ್ಸ್ ಸಿ ಧೋನಿ ಬಿ ಕುಮಾರ್112
ಡೇವಿಡ್ ಮಿಲ್ಲರ್ ಎಲ್‌ಬಿಡಬ್ಲು ಬಿ ಹರ್ಭಜನ್ 06
ಬೆಹರ್ದೀನ್ ಎಲ್‌ಬಿಡಬ್ಲು ಬಿ ಮಿಶ್ರಾ 22
ಕ್ರಿಸ್ ಮೊರೀಸ್ ರನೌಟ್(ರಹಾನೆ)09
ಫ್ಯಾಂಗಿಸೊ ಸಿ ಪಟೇಲ್ ಬಿ ಕುಮಾರ್20
ಡೇಲ್ ಸ್ಟೇಯ್ನ ಸಿ ರಹಾನೆ ಬಿ ಕುಮಾರ್06
ರಬಾಡ ಔಟಾಗದೆ 08
ಇಮ್ರಾನ್ ತಾಹಿರ್ ಔಟಾಗದೆ 04
ಇತರೆ10
ವಿಕೆಟ್ ಪತನ: 1-36, 2-67, 3-79, 4-88, 5-144, 6-185, 7-233, 8-250, 9-250.
ಬೌಲಿಂಗ್ ವಿವರ
ಭುವನೇಶ್ವರ ಕುಮಾರ್10-0-68-3
ಮೋಹಿತ್ ಶರ್ಮ10-0-48-1
ಹರ್ಭಜನ್ ಸಿಂಗ್10-0-50-2
ಅಕ್ಷರ್ ಪಟೇಲ್10-0-40-1
ಅಮಿತ್ ಮಿಶ್ರಾ 10-1-55-1
ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ,