ಮನೋರಂಜನೆ

ಕ್ರಿಸ್‍ಮಸ್‍ನಂದು ಯಶ್ ಅಭಿನಯದ ಮಾಸ್ಟರ್‍ಪೀಸ್ ಚಿತ್ರ ತೆರೆಗೆ….ಕಾರಣ…? ಇಲ್ಲಿದೆ ನೋಡಿ..

Pinterest LinkedIn Tumblr

masterpiece

ಬೆಂಗಳೂರು: ಬಿ-ಟೌನ್‍ನಲ್ಲಿ ಒಂದು ಸಂಪ್ರದಾಯ ಇದೆ. ಅದೇನೆಂದರೆ ಶಾರೂಖ್ ಖಾನ್ ದೀಪಾವಳಿಯಂದು, ಸಲ್ಮಾನ್ ಖಾನ್ ರಂಜಾನ್ ಹಾಗೂ ಅಮೀರ್ ಖಾನ್ ಕ್ರಿಸ್‍ಮಸ್‍ಗೆ ತಮ್ಮ ಚಿತ್ರಗಳನ್ನು ರಿಲೀಸ್ ಮಾಡಿ ಗೆಲ್ಲುತ್ತಾರೆ. ಈಗ ಆ ಸಂಪ್ರದಾಯ ಕನ್ನಡಕ್ಕೂ ಬಂದಿದ್ದು, ನಟ ಯಶ್ ಈ ಸಂಪ್ರದಾಯ ಶುರು ಮಾಡಿದ್ದಾರೆ.

ಹೌದು. ಕಳೆದ ವರ್ಷದ ಕ್ರಿಸ್‍ಮಸ್‍ಗೆ ಯಶ್ ನಟನೆಯ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರ ರಿಲೀಸ್ ಆಗಿ ಸಖತ್ ಹಿಟ್ ಆಗಿತ್ತು. ಈಗ ಅವರ ಮಾಸ್ಟರ್‍ಪೀಸ್ ಚಿತ್ರ ಕೂಡ ಕ್ರಿಸ್‍ಮಸ್‍ಗೆ ತೆರೆಗೆ ಬರಲು ಸಜ್ಜಾಗಿದೆ.

ಮಂಜು ಮಾಂಡವ್ಯ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಚಿತ್ರದಲ್ಲಿ ನಟ ಯಶ್ ದ್ವೀಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಯಶ್‍ಗೆ ಚಂದ್ರಲೇಖ ಚಿತ್ರದ ನಾಯಕಿ ಶಾನ್ವಿ ಸಾಥ್ ನೀಡಿದ್ದಾರೆ. ರಾಮಾಚಾರಿ ಯಶಸ್ಸಿನ ನಂತರ ಬರುತ್ತಿರುವ ಚಿತ್ರ `ಮಾಸ್ಟರ್ ಪೀಸ್’ ಆಗಿರುವುದರಿಂದ ಸಿನಿರಸಿಕರಲ್ಲಿನ ನಿರೀಕ್ಷೆ ಹೆಚ್ಚಿದೆ. ಹಾಗಾಗಿ ಕ್ರಿಸ್‍ಮಸ್ ರಜೆ ಸಮಯದಲ್ಲಿ ರಿಲೀಸ್ ಮಾಡಬೇಕು ಎನ್ನುವುದು ಚಿತ್ರತಂಡದ ನಿರ್ಧಾರವಾಗಿದೆ.

Write A Comment