ಸಲ್ಮಾನ್‍ಖಾನ್ ಮದ್ವೆ ಆಗಲು ನಿರ್ಧರಿಸಿದ್ದಾರಾ? ರೊಮೇನಿಯನ್ ಟಿವಿ ಸ್ಟಾರ್ ಲುಲಿಯಾ ವ್ಯಾಂಟೂರ್ ಜೊತೆ ಮುಂದಿನ ವರುಷ ಸಲ್ಲು ಮದ್ವೆ ಆಗ್ತಿದ್ದಾರಂತೆ.
ಸೋದರಿ ಅರ್ಪಿತಾಖಾನ್ ಮದ್ವೆ ವೇಳೆ ಲುಲಿಯಾ, ಸಲ್ಲು ಕುಟುಂಬಕ್ಕೆ ಪರಿಚಿತಳಾದಳಂತೆ. ಆಗಲೇ ಪ್ರೀತಿ ಶುರುವಾಗಿ, ಎಂಗೇಜ್‍ಮೆಂಟೂ ಮುಗಿದಿದೆ ಎಂಬ ರೂಮರ್ ಹಬ್ಬಿದೆ.
ಲುಲಿಯಾ ಕೈ ಬೆರಳಿನಲ್ಲಿರುವ ಎಂಗೇಜ್‍ಮೆಂಟ್ ರಿಂಗ್ ಇದಕ್ಕೆ ಸಾಕ್ಷಿಯಂದು ರೊಮೇನಿಯಾದ ಮಾಧ್ಯಮಗಳು ಸುದ್ದಿಮಾಡಿವೆ. ಅರ್ಪಿತಾಖಾನ್ ಮದ್ವೆಗೆ ಬಂದಿದ್ದ ಲುಲಿಯಾಳನ್ನು ಸಲ್ಲು ಬಾಂದ್ರಾದ ಫೈವ್‍ಸ್ಟಾರ್ ಹೋಟೆಲ್‍ನಲ್ಲಿ ಉಳಿಸಿದ್ದನಂತೆ.
ಹೋಟೆಲ್ ಬಿಲ್ಲನ್ನೂ ಈತನೇ ಕೊಟ್ಟಿದ್ದಾನಂತೆ. ಆದರೆ, ಸಲ್ಮಾನ್‍ಖಾನ್ ಈ ಸಂಬಂಧದ ಬಗ್ಗೆ ಎಲ್ಲೂ ಬಾಯಿಬಿಟ್ಟಿಲ್ಲ. ಸಂಗೀತಾ ಬಿಜ್ಲಾನಿ, ಐಶ್ವರ್ಯಾ ರೈ, ಕತ್ರಿನಾ ಕೈಫ್ ನಂತರ ಹಲವು ಸುಂದರಿಯರೊಂದಿಗೆ ಸಲ್ಲು ಹೆಸರು ಕೇಳಿಬರುತ್ತಲೇ ಇತ್ತು. ಆದರೆ, ಈ ಲುಲಿಯಾ ಸುದ್ದಿ ಅಧಿಕೃತ ಎನ್ನುತ್ತಿದ್ದಾರೆ ಸಲ್ಲುವಿನ ಆಪ್ತರು.
