ಮನೋರಂಜನೆ

ಮತ್ತೆ ತೆಲುಗಿನತ್ತ ಮುಖ ಮಾಡಿದ ಇರ್ಫಾನ್‍ಖಾನ್

Pinterest LinkedIn Tumblr

irrfan-khan-networth

ಮಲ್ಟಿ ಟಾಲೆಂಟೆಡ್ ಸ್ಟಾರ್ ಇರ್ಫಾನ್ ಖಾನ್ ರೂಟ್ ಬದಲಾಗಿದೆ. ಬಾಲಿವುಡ್ ಟು ಹಾಲಿವುಡ್, ಹಾಲಿವುಡ್ ಟು ಬಾಲಿವುಡ್ ಎಂದು ತಿರುಗಾಡ್ಕೊಂಡಿದ್ದ ಈ ನಟನೀಗ ಟಾಲಿವುಡ್‍ನತ್ತ ಕಾಲಿಟ್ಟಿದ್ದಾರೆ.

ಚಂದ್ರಶೇಖರ್ ಯಲೆಟಿ ನಿರ್ದೇಶನದ ಮುಂದಿನ ಚಿತ್ರಕ್ಕೆ ಇರ್ಫಾನ್ ಒಪ್ಪಿಕೊಂಡಿದ್ದಾರೆ. `ಲೈಫ್ ಆಫ್ ಪೈ’ ಖ್ಯಾತಿಯ ನಟ ತೆಲುಗು ಚಿತ್ರರಂಗಕ್ಕೆ ಹೊಸಮುಖವೇನಲ್ಲ. ಈ ಹಿಂದೆ ಮಹೇಶ್‍ಬಾಬು ನಟಿಸಿದ `ಸೈನಿಕುಡು’ ಚಿತ್ರದಲ್ಲಿ ಇರ್ಫಾನ್ ಕಾಣಿಸಿಕೊಂಡಿದ್ದರು.

ಬರೋಬ್ಬರಿ 9 ವರುಷದ ನಂತರ ಇರ್ಫಾನ್ ಇಲ್ಲಿಗೆ ಮರಳಿ ಹೆಜ್ಜೆಯಿಟ್ಟಿದ್ದಾರೆ. ಆಗಿನ ಇರ್ಫಾನ್ ಬೇರೆ, ಈಗಿನ ಇರ್ಫಾನೇ ಬೇರೆ. ಹೀಗಾಗಿ ಈ ಚಿತ್ರಕ್ಕಾಗಿ ತೆಲುಗು ಮಂದಿ ಕಾಯ್ತಿದ್ದಾರಂತೆ. ಇನ್ನೂ ಹೆಸರಿಡದ ಯಲೆಟಿ ಅವರ ಈ ಚಿತ್ರ ತೆಲುಗು, ತಮಿಳು, ಮಲಯಾಳಂನಲ್ಲೂ ತೆರೆಕಾಣಲಿದೆ.

Write A Comment