ಇಟೆಲಿ : ಚಿತ್ರರಂಗದಲ್ಲಿ ತಮ್ಮ ಕಲಾ ಪ್ರತಿಭೆ ಮೂಲಕ ಗುರುತಿಸಿಕೊಂಡ ಅನೇಕರನ್ನು ನಾವು ನೋಡಿರ್ತೀವಿ ಇಲ್ಲ ಕೇಳಿರ್ತೀವಿ ಆದರೆ ಇಲ್ಲೊಬ್ಬ ನಟ ಅಶ್ಲೀಲವಾಗಿಯೇ ಕಾಣಿಸಿಕೊಂಡು ‘ಅ’ಸಾಧರಣ ಸಾಧನೆ ಮಾಡಿದ್ದಾನೆ.
ಇಟೆಲಿ ದೇಶದ ನಟನಾದ ರೋಕೋ ಸಿಫ್ರೆಡಿ ಇಂತಹ ‘ಅ’ಸಾಧರಣ ಸಾಧನೆ ಮಾಡಿ ಪ್ರಚಾರಗಿಟ್ಟಿಸಿಕೊಂಡಿರುವ ನಾಯಕ ನಟ.
1984ರಿಂದ ನೀಲಿ ಚಿತ್ರಗಳ ಮೂಲಕ ‘ಪ್ರ’ವೃತ್ತಿ ಆರಂಭಿಸಿದ ನಟ ರೋಕೋ ಸಿಫ್ರೆಡಿ ಬರೋಬ್ಬರಿ 1300ಕ್ಕೂ ಹೆಚ್ಚು ಬ್ಲೂ ಫಿಲಂಸ್’ನಲ್ಲಿ ನಟಿಸಿದ್ದಾರೆ.
ಅಷ್ಟೇ ಅಲ್ಲದೆ ತಮ್ಮ ರತಿಕ್ರೀಡಾಭಿನಯಕ್ಕೆ 30ಕ್ಕೂ ಹೆಚ್ಚು ಆವಾರ್ಡ್ಸ್’ಗಳನ್ನೂ ಪಡೆದಿದ್ದಾನೆ. ಸದ್ಯ ನೀಲಿ ಚಿತ್ರಗಳ ಅಭಿನಯದಿಂದ ದೂರವಿರಲು ಬಯಸಿರುವ 51ರ ಸಿಫ್ರೆಡಿ ಡೈರೆಕ್ಷನ್ ಮತ್ತು ಪ್ರೊಡಕ್ಷನ್’ನಲ್ಲಿ ಮುಂದುವರೆಯಲಿದ್ದೇನೆ ಎಂದು ಹೇಳಿದ್ದಾನೆ.
ಅಷ್ಟೇ ಅಲ್ಲದೆ ಸೆಕ್ಸ್ ಅಭಿನಯದ ಬಗ್ಗೆ ಟಿಪ್ಸ್ ನೀಡಲು ಪೋರ್ನ್ ಯೂನಿವರ್ಸಿಟಿ ಸ್ಥಾಪಿಸಿದ್ದಾರೆ. ಇಲ್ಲಿ ತಮ್ಮ ‘ಅನುಭವ’ವನ್ನು ಹಂಚಿಕೊಂಡು ಹೊಸದಾಗಿ ಪೋರ್ನ್ ಸ್ಟಾರ್’ಗಳಾಗಲು ಬಯಸುವವರಿಗೆ ಬಿಚ್ಚೊ ಕಲೆಯನ್ನು ಹೇಳಿಕೊಡಲಿದ್ದಾರೆ.
ಈ ಯೂನಿವರ್ಸಿಟಿಗೆ ಈಗಾಗಲೇ ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದು ಅದರಲ್ಲಿ 14 ಪುರುಷರನ್ನು ಮತ್ತು 7 ಮಂದಿ ಯುವತಿಯರನ್ನು ಆಯ್ಕೆ ಮಾಡಿ ಅನುಭವದ ಪಾಠ ಹೇಳಿಕೊಡಲಿದ್ದೇನೆ ಎಂದು ರೋಕೋ ಸಿಫ್ರೆಡಿ ತಿಳಿಸಿದ್ದಾನೆ.
-ಕಪ್ಪು ಮೂಗುತ್ತಿ
-ಉದಯವಾಣಿ