ಮನೋರಂಜನೆ

ಜಮೀರಣ್ಣ ಪುತ್ರ ಬಾಲಿವುಡ್ ಎಂಟ್ರಿಗೆ ರೆಡಿ

Pinterest LinkedIn Tumblr

jameerಒಬ್ಬೊಬ್ಬರೇ ರಾಜಕೀಯ ನಾಯಕರ ಮಕ್ಕಳು ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಜೆಡಿಎಸ್‌ ನಾಯಕರಾದ  ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖೀಲ್‌, ಚೆಲುವರಾಯಸ್ವಾಮಿ ಪುತ್ರ ಸಚಿನ್‌ ನಂತರ ಇದೀಗ ಜಮೀರ್‌ಅಹಮದ್‌ ಖಾನ್‌
ಪುತ್ರನ ಸರದಿ.

ಹೌದು, ಜೆಡಿಎಸ್‌ನ ಕುಮಾರಣ್ಣ, ಚೆಲುವಣ್ಣ, ಜಮೀರಣ್ಣ ಬದ್ರರ್ ಪೈಕಿ ಕುಮಾರಣ್ಣ-ಚೆಲುವಣ್ಣ ಪುತ್ರರು ಚಿತ್ರರಂಗ ಪ್ರವೇಶ ಈಗಾಗಲೇ ಘೋಷಣೆಯಾಗಿದ್ದು ಇದೀಗ ಜಮೀರ್‌ ಅಹಮದ್‌ ಖಾನ್‌ ಪುತ್ರ ಜೈದ್‌ ಖಾನ್‌ ಚಿತ್ರರಂಗ ಪ್ರವೇಶ ಘೋಷಣೆ ಸದ್ಯದಲ್ಲೇ ಹೊರಬೀಳಲಿದೆ.

ಅಷ್ಟೇ ಅಲ್ಲ, ನಿಖೀಲ್‌ ಹಾಗೂ ಸಚಿನ್‌ ಸ್ಯಾಂಡಲ್‌ ವುಡ್‌ ಪ್ರವೇಶ ಮೂಲಕ ಸಿನಿ ಪ್ರಯಾಣ ಮಾಡಿದರೆ ಜೈದ್‌ ಖಾನ್‌ ಬಾಲಿವುಡ್‌ ಮೂಲಕ ಎಂಟ್ರಿ ಕೊಡುವ ಸಿದ್ದತೆಯಲ್ಲಿದ್ದಾರೆ. ಈಗಾಗಲೇ ಸ್ಕ್ರೀನ್‌ ಟೆಸ್ಟ್‌ ಸಹ ಮುಗಿದಿದೆ. ರಾಂಪಾಲ್‌ವರ್ಮಾ ಮೂಲಕ ಪುತ್ರನನ್ನು ಬಾಲಿವುಡ್‌ ಪರಿಚಯಿಸಲು ಜಮೀರ್‌ ಅಹಮದ್‌ ಖಾನ್‌ ಒಲವು ಹೊಂದಿದ್ದಾರೆ.

ಪ್ರೀತಿ -ಪ್ರೇಮ, ಕೌಟುಂಬಿಕ ಸಂಬಂಧ, ಹಾಸ್ಯ ಕೇಂದ್ರೀಕೃತ ಕಥೆ ಹಿನ್ನೆಲೆಯ ಚಿತ್ರ ಮಾಡುವ ಬಗ್ಗೆ ಪ್ರಾರಂಭಿಕ ಚರ್ಚೆಗಳು ನಡೆದಿವೆ. ಎಲ್ಲವೂ ಅಂದುಕೊಂಡಂತೆ ಆದರೆ ಜನವರಿ ವೇಳೆಗೆ ಜೈದ್‌ ಖಾನ್‌ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ
ಎಂದು ಹೇಳಲಾಗಿದೆ.

ಗೋವಾದಲ್ಲಿ “ಬ್ರ್ಯಾಂಡ್ಸ್‌’ ಆಕಾಡೆಮಿ ವತಿಯಿಂದ ನಡೆಸಿದ ಬಾಲಿವುಡ್‌ಗೆ ಹೊಸಮುಖಗಳ ಶೋಧ ಸ್ಪರ್ಧೆ ಹಾಗೂ “ಐಕಾನ್‌
ಅವಾರ್ಡ್ಸ್ ಆಫ್ ದ ಇಯರ್‌ ಕಾರ್ಯಕ್ರಮದಲ್ಲಿ ಜೈದ್‌ಖಾನ್‌ “ಫ್ರೆಶ್‌ ಫೇಸ್‌ ಆಫ್ ದ ಇಯರ್‌ 2015′ ಪ್ರಶಸ್ತಿ  ತನ್ನದಾಗಿಸಿಕೊಂಡಿದ್ದಾರೆ.

ಇದರ ಬೆನ್ನಲ್ಲೇ ಹಿಂದಿ ಚಲನಚಿತ್ರರಂಗದ ನಿರ್ದೇಶಕ-ನಿರ್ಮಾಪಕರು ಜೈದ್‌ ಖಾನ್‌ಗೆ ಆಫ‌ರ್‌ ಸಹ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರಿನ ಜೈನ್‌ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಜೈದ್‌ ಖಾನ್‌ ಸಿನಿಮಾ ಮತ್ತು ಫ್ಯಾಶನ್‌ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದು, ಮುಂಬೈನಲ್ಲಿ ಫ್ಯಾಶನ್‌ ಶೋ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡು ಸೈ ಎನಿಸಿಕೊಂಡಿದ್ದಾರೆ.

ದಿನಕ್ಕೆ ನಾಲ್ಕು ಗಂಟೆ ಜಿಮ್‌ನಲ್ಲೂ ಜೈಯ್‌ ಖಾನ್‌ ಬೆವರು ಸುರಿಸುತ್ತಿದ್ದಾರೆ. ಮನೆಯಲ್ಲಿಯೇ ಅದಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿದ್ದಾರೆ.  ಸಾಹಸ ತರಬೇತಿಗಾಗಿ ಥಾಯ್ಲೆಂಡ್‌ಗೆ ಹೋಗಲಿದ್ದಾರಂತೆ. ಸಿನಿಮಾ ಪ್ರವೇಶ  ಕುರಿತು”ಉದಯವಾಣಿ’ಜತೆ ಮಾತನಾಡಿದ ಜೈದ್‌ ಖಾನ್‌, ಫ್ಯಾಶನ್‌ ಮತ್ತು ಸಿನಿಮಾ ನನ್ನ ಆಸಕ್ತಿ ವಲಯ. ಎರಡಲ್ಲಿ
ಮೊದಲ ಆಯ್ಕೆ ಎಂದರೆ ಸಿನಿಮಾ.

ನನಗೆ ಮೊದಲಿನಿಂದಲೂ ಸಿನಿಮಾ ಬಗ್ಗೆ ಹೆಚ್ಚು ಒಲವು. ಹೀಗಾಗಿ, ಇದೇ ಕ್ಷೇತ್ರ ಆಯ್ದುಕೊಳ್ಳಲು ನಿರ್ಧರಿಸಿದ್ದೇನೆ. ಇದರ ಜತೆಯಲ್ಲೇ ವ್ಯಾಸಂಗ ಸಹ ಮುಂದುವರಿಸುತ್ತೇನೆ ಎಂದು ಹೇಳುತ್ತಾರೆ.ಸಿನಿಮಾ ಪ್ರವೇಶದ ಬಗ್ಗೆ ನಮ್ಮ ತಂದೆಯವರು ಮುಕ್ತ
ಸ್ವಾತಂತ್ರ್ಯ ನೀಡಿದ್ದಾರೆ. ನನ್ನ ಆಸಕ್ತಿ ವಿಚಾರಗಳ ಬಗ್ಗೆ ಅವರಲ್ಲಿ ಹೇಳಿಕೊಂಡಾಗ ಗ್ರೀನ್‌ ಸಿಗ್ನಲ್‌ ನೀಡಿದರು. ನನ್ನ ಆಸೆಗೆ ಎಂದೂ ಅವರು ವಿರೋಧ ಅಥವಾ ನಿರಾಕರಿಸಿದವರಲ್ಲ. ಹೀ ಈಸ್‌ ಮೈ ಗ್ರೇಟ್‌ ಡ್ಯಾಡ್‌ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಪುತ್ರನ ಸಿನಿಮಾ ಪ್ರವೇಶದ ಬಗ್ಗೆ ಜಮೀರ್‌ ಅಹಮದ್‌ ಖಾನ್‌ ಪ್ರತಿಕ್ರಿಯಿಸಿ, ಎಲ್ಲ ದೈವೇಚ್ಛೆ. ಸಿನಿಮಾ ಬಗ್ಗೆ ಆಸಕ್ತಿಯಿಂದೆ ಎಂದು ಹೇಳಿದ. ಅದಕ್ಕೆ ಸಾಕಷ್ಟು ಪರಿಶ್ರಮ, ತಾಳ್ಮೆ ಸಮಾಧಾನ ಬೇಕು. ಯಾವುದೇ  ಮಾರ್ಗ ಆಯ್ಕೆ ಮಾಡಿಕೊಂಡರೂ ಒಳ್ಳೆಯದಾಗಲಿ ಎಂದು ಹಾರೈಸಿದೆ. ಆತ ಬಾಲಿವುಡ್‌, ಸ್ಯಾಂಡಲ್‌ ವುಡ್‌ ಎಂಬ ಆಯ್ಕೆ ಏನಿಲ್ಲ, ಅವರು ಮೊದಲು
ಕನ್ನಡದ ಹುಡುಗ ಎಂದು ಹೇಳುತ್ತಾರೆ.
-ಉದಯವಾಣಿ

Write A Comment