ಹುಚ್ಚು ಅಭಿಮಾನಿಗಳು ಜನಪ್ರಿಯ ನಟ-ನಟಿಯರ ವೆಬ್‌ಸೈಟ್, ಟ್ಯೂಟರ್ ಖಾತೆಗಳನ್ನು ಹೈಜಾಕ್ ಮಾಡುವುದು ಸರ್ವೇ ಸಾಮಾನ್ಯ.
ಆದರೆ ಇಲ್ಲೊಬ್ಬ ಕಳ್ಳ ತನ್ನ ನೆಚ್ಚಿನ ನಟಿಯ ಬಟ್ಟೆಗಳಿದ್ದ ಬ್ಯಾಗನ್ನು ಅಭಿಮಾನದಿಂದಲೆ ದೋಚಿದ್ದಾನೆ. ಆ ನಟಿ ಯಾರೆಂದುಕೊಂಡಿರಾ…ಬಾಲಿವುಡ್‌ನ ಬಳುಕುವ ಬೆಡಗಿ ಅಮ್ರಿತಾ ರಾವ್. ಈ ಕಳ್ಳತನ ನಡೆದಿದ್ದು ಬೇರೆಲ್ಲೂ ಅಲ್ಲ. ಜೈಪುರ್‌ನ ಏರ್‌ರ್ಪೋಟ್‌ನಲ್ಲಿ…! ಹೌದು.
ಇತ್ತೀಚೆಗೆ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳಬೇಕಿದ್ದ ಅಮ್ರಿತಾ ರಾವ್ ಎಂಬ ಸುಂದರ ಬೆಡಗಿಯ ಬೆಲೆಬಾಳುವ ಬಟ್ಟೆಗಳು ಹಾಗೂ ಚಪ್ಪಲಿಗಳಿದ್ದ ಪಿಂಕ್ ಬ್ಯಾಗನ್ನು ಯಾರೋ ಚಾಲಾಕಿ ಕಳ್ಳ ಅಪಹರಿಸಿದ್ದಾನಂತೆ. ರಿಯಾಲಿಟಿ ಶೋನಲ್ಲಿ ಭಾಗವಹಿಸಲು ವಿಮಾನದಲ್ಲಿ ಬಂದು ಇಲ್ಲಿನ ಏರ್‌ಪೋರ್ಟ್‌ನಲ್ಲಿ ಇಳಿದು ಹೊರ ಬರುವಷ್ಟರಲ್ಲಿ ಯಾರೋ ಕದೀಮರು ನನ್ನ ಬ್ಯಾಗನ್ನು ಕಳವು ಮಾಡಿದ್ದಾರೆಂದು ಅಮ್ರಿತಾ ಪೊಲೀಸರಿಗೆ ದೂರು ನೀಡಿದ್ದಾಳೆ.
ತಮ್ಮ ಜನಪ್ರಿಯತೆಗಾಗಿ ತುಂಡು ಬಟ್ಟೆಯನ್ನು ಹಾಕಿಕೊಳ್ಳಲು ಹಿಂಜರಿಯದ ನಟಿಯರಿರುವಾಗ ತನ್ನ ಕಳೆದು ಹೋಗಿರುವ ಬಟ್ಟೆಗಳ ಬ್ಯಾಗ್ ಬಗ್ಗೆ ಒಲವನ್ನು ಹೊಂದಿರುವ ಅಮ್ರಿತಾಳನ್ನು ಮೆಚ್ಚಲೆ ಬೇಕಲ್ಲವೆ.