ಕನ್ನಡಿಗರ ಬಹುದಿನಗಳ ಕುತೂಹಲಕ್ಕೆ ಇನ್ನು ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಸೀಸನ್-3 ಆರಂಭವಾಗಲಿದೆ. ಅಕ್ಟೋಬರ್ 17 ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಸೀಸನ್-3 ಕಾರ್ಯಕ್ರಮ ಪ್ರಸಾರವಾಗಲಿದೆ.
ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಹೋಗ್ತಾರೆ ಅನ್ನೋ ಕುತೂಹಲ ಆರಂಭದಿಂದಲೇ ಎಲ್ಲರನ್ನೂ ಕಾಡುತ್ತಿತ್ತು. ಆದರೂ ಇದುವರೆಗೂ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಯಾರು ಅನ್ನೋದು ಖಚಿತವಾಗಿಲ್ಲ. ಇನ್ನು ಈ ಬಾರಿ ಬಿಗ್ ಬಾಸ್ ಮನೆಯನ್ನು ಬೆಂಗಳೂರಿನ ಬಿಡದಿಯಲ್ಲೇ ನಿರ್ಮಿಸಲಾಗಿದೆ.ಇದೀಗ ಕಾರ್ಯಕ್ರಮದ ಟೆಸ್ಟ್ ರನ್ ಈಗಾಗಲೇ ಶುರುವಾಗಿದ್ದು, ಈ ಟೆಸ್ಟ್ ಗೆ ಟೆಕ್ನಿಕಲ್ ತಂಡ ಡಮ್ಮಿ ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಯ ಒಳಗೆ ಇಟ್ಟುಕೊಂಡು ಟೆಸ್ಟಿಂಗ್ ಕಾರ್ಯ ಮಾಡುತ್ತಿದೆ.
ಇನ್ನು ಬಿಗ್ ಬಾಸ್ 3′ ಹೊಸ ಮನೆಯ ಒಳಗಡೆ ಸುಮಾರು 80 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಬೆಂಗಳೂರು-ಮೈಸೂರು ಹೈವೆ ರಸ್ತೆಯಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ ಬಾಸ್ ಮನೆ ಮಾಡಲಾಗಿದೆ. ಎಂದಿನಂತೆ ಈ ಬಾರಿಯೂ ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.