ಮನೋರಂಜನೆ

ರೆಹಮಾನ್​ಗೆ ಮಂಗೇಷ್ಕರ್ ಪ್ರಶಸ್ತಿ

Pinterest LinkedIn Tumblr

rahman-fiಮುಂಬೈ: ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಹೃದಯನಾಥ್ ಮಂಗೇಷ್ಕರ್ ಪ್ರಶಸ್ತಿಗೆ ಭಾಜನರಾಗಿದ್ದು, ಇದೇ ಅಕ್ಟೋಬರ್ 26ರಂದು ಪ್ರದಾನ ಮಾಡಲಾಗುತ್ತಿದೆ.

ಖ್ಯಾತ ಚಿತ್ರ ನಿರ್ಮಾಪಕ ಸುಭಾಷ್ ಘಾಯ್ ಅವರು ಹೃದಯನಾಥ್ ಮಂಗೇಷ್ಕರ್ ಜನ್ಮದಿನದಂದು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಹೃದಯನಾಥ್ ಮಂಗೇಷ್ಕರ್ ಅವರು ಖ್ಯಾತ ಸಂಗೀತಗಾರ್ತಿ ಲತಾ ಮಂಗೇಷ್ಕರ್ ಮತ್ತು ಆಶಾ ಬೋಸ್ಲೆ ಅವರ ಸೋದರರಾಗಿದ್ದಾರೆ. ಈ ಮೊದಲು ಲತಾ ಮಂಗೇಷ್ಕರ್, ಆಶಾ ಬೋಸ್ಲೆ, ಅಮಿತಾಬ್ ಬಚ್ಚನ್ ಮತ್ತು ಸುಲೋಚನಾ ತೈ ಅವರಿಗೆ ಈಗಾಗಲೇ ಈ ಪ್ರಶಸ್ತಿ ಸಂದಿದೆ.

ಕಳೆದ ಎರಡು ದಶಕಗಳಿಂದ ಚಿತ್ರ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಎ.ಆರ್.ರೆಹಮಾನ್ ಅವರಿಗೆ ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳು ಸಂದಿದ್ದು, 2009ರಲ್ಲಿ ಆಸ್ಕರ್ ಪ್ರಶಸ್ತಿಯನ್ನು ಸಂಪಾದಿಸಿಕೊಂಡಿದ್ದಾರೆ.

Write A Comment