ಮನೋರಂಜನೆ

ರಿಲೀಸ್‌ಗೆ ತಯಾರಿ ನಡೆಸುತ್ತಿದೆ ಪ್ಲಸ್ ಸಿನಿಮಾ

Pinterest LinkedIn Tumblr

anathಅನಂತ ನಾಗ್ ಅವರು ಹೊಸ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಪ್ಲಸ್. ಹಲವು ವಿಶೇಷತೆಗಳಿಂದ ಕೂಡಿರುವ ಈ ಸಿನಿಮಾ ಸದ್ಯ ರಿಲೀಸ್ ಗೆ ತಯಾರಿ ನಡೆಸುತ್ತಿದೆ.

ಈಗಾಗ್ಲೇ ಸ್ಯಾಂಡಲ್ ವುಡ್ ಅಂಗಳದಲ್ಲಿ ಸುದ್ದಿ ಮಾಡಿರುವ ಈ ಸಿನಿಮಾ ಮುಂದಿನ ವಾರ ಅಂದ್ರೆ ಅಕ್ಟೋಬರ್ 16 ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಬಹು ದೊಡ್ಡ ತಾರಾಗಣವಿದೆ. ಸಿನಿಮಾದಲ್ಲಿ ಖಳ ನಟ ರವಿಶಂಕರ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರಂತೆ.

ಯೋಗರಾಜ್ ಭಟ್ ಶಿಷ್ಯ ಗಡ್ಡ ವಿಜಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಹಿಂದೆ ಗಡ್ಡ ವಿಜಿ ದ್ಯಾವ್ರೆ ಅನ್ನೋ ಸಿನಿಮಾವನ್ನು ನಿರ್ದೇಶಿಸಿದ್ದರು. ಇನ್ನು ಸಿನಿಮಾವನ್ನು ಯೋಗರಾಜ್ ಭಟ್ ಬ್ಯಾನರ್ ನಡಿ ನಿರ್ಮಿಸಲಾಗಿದೆ. ಈಗಾಗಲೇ ಸಿನಿಮಾ ಪ್ರಮೋಷನ್ ಗಾಗಿ ಪ್ರೋಮೋದೊಂದನ್ನು ರಿಲೀಸ್ ಮಾಡಲಾಗಿದ್ದು, ಪ್ರೋಮೋದಲ್ಲಿ ಅಚ್ಯುತ್ ರಾವ್ ಮುಂತಾದವರ ನಟನೆ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸಿದೆ.

Write A Comment