ಮನೋರಂಜನೆ

ಹಾಸ್ಯ ಕಲಾವಿದ ಕಪಿಲ್ ಶರ್ಮಾ ಅವರನ್ನು ಹೊರ ಹಾಕಿದ ಐಶ್ವರ್ಯ ಅಂಗರಕ್ಷಕ

Pinterest LinkedIn Tumblr

new-kapilaಹಾಸ್ಯಭರಿತ ಡೈಲಾಗ್ ಹಾಗೂ ಸಮಯೋಚಿತ ಹಾವಭಾವದೊಂದಿಗೆ ಕಿರು ತೆರೆಯ ವೀಕ್ಷಕರ ಮನಕ್ಕೆ ಲಗ್ಗೆ ಹಾಕಿರುವ ಕಪಿಲ್ ಶರ್ಮಾ ಈಗ ಹಿರಿ ತೆರೆಗೂ ಕಾಲಿಟ್ಟಿದ್ದಾರೆ. ಅಬ್ಬಾಸ್- ಮಸ್ತಾನಿ ನಿರ್ದೇಶನದ ‘ಕಿಸ್ ಕಿಸ್ ಕೋ ಪ್ಯಾರ್ ಕರೋ’ ಬಾಲಿವುಡ್ ಚಿತ್ರದಲ್ಲಿ ಕಪಿಲ್ ಶರ್ಮಾ ನಟಿಸಿದ್ದು, ಈ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

‘ಕಾಮಿಡಿ ನೈಟ್ಸ್ ವಿತ್ ಕಪಿಲ್ ಶರ್ಮಾ’ ಷೋ ನಲ್ಲಿ ಬಾಲಿವುಡ್ ಚಿತ್ರಗಳ ಬಿಡುಗಡೆ ವೇಳೆ ಪ್ರಮೋಷನ್ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ವಾಡಿಕೆ. ಅದರಂತೆ ಈಗ ಬಹು ಕಾಲದ ನಂತರ ಐಶ್ವರ್ಯಾ ರೈ ಬಚ್ಚನ್ ಅಭಿನಯಿಸಿರುವ ‘ಜಜ್ಬಾ’ ವನ್ನೂ ಕಪಿಲ್ ಶರ್ಮಾ ಪ್ರಮೋಟ್ ಮಾಡುತ್ತಿದ್ದಾರೆ. ಈ ವೇಳೆ ಕಪಿಲ್, ಷೋ ನಲ್ಲಿ ಐಶ್ವರ್ಯಾ ರೈ ಕೂಡಾ ಪಾಲ್ಗೊಳ್ಳಲಿದ್ದಾರೆ. ಆದರೆ ಐಶ್ವರ್ಯಾ ರೈ ಅವರನ್ನು ಭೇಟಿಯಾಗಲು ಕಪಿಲ್ ಶರ್ಮಾ ವ್ಯಾನಿಟಿ ಒಳಗೆ ಹೋದಾಗ ಐಶ್ವರ್ಯಾ ರೈ ಬಾಡಿಗಾರ್ಡ್ ಕಪಿಲ್ ಶರ್ಮಾ ಅವರನ್ನು ವ್ಯಾನಿಟಿ ವ್ಯಾನ್ ನಿಂದ ಹೊರಗೆ ತಳ್ಳಿದ್ದಾರೆ.

ಈ ಚಿತ್ರಗಳು ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿವೆ. ಐಶ್ವರ್ಯಾ ರೈ ಅವರ ಬಾಡಿಗಾರ್ಡ್ ಯಾಕಾಗಿ ಕಪಿಲ್ ಶರ್ಮಾರನ್ನು ವ್ಯಾನಿಟಿ ವ್ಯಾನ್ ನಿಂದ ಹೊರ ತಳ್ಳಿದರೆಂಬುದನ್ನು ತಿಳಿದುಕೊಳ್ಳಲು ಈ ಕಾರ್ಯಕ್ರಮ ಪ್ರಸಾರವಾಗುವವರೆಗೂ ಕಾಯಲೇಬೇಕು. ‘ಜಜ್ಬಾ’ ಚಿತ್ರದ ಪ್ರಮೋಷನ್ ಅಂಗವಾಗಿ ಈ ರೀತಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

Write A Comment