ಮನೋರಂಜನೆ

ನವೆಂಬರ್ 6ಕ್ಕೆ ಕಿಲ್ಲಿಂಗ್ ವೀರಪ್ಪನ್ ರಿಲೀಸ್

Pinterest LinkedIn Tumblr

veerappanಸ್ಯಾಂಡಲ್ ವುಡ್ ಅಂಗಳದಲ್ಲಿ ಈಗಾಗಲೇ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿ ಹಾಕಿರುವ ಸಿನಿಮಾ ಕಿಲ್ಲಿಂಗ್ ವೀರಪ್ಪನ್. ಶಿವರಾಜ್ ಕುಮಾರ್ ಹಾಗೂ ರಾಮ್ ಗೋಪಾಲ ಮರ್ಮಾ ಕಾಂಬಿನೇಷನ್ ನ ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿ ಹಾಕಿತ್ತು. ಇದೀಗ ಈ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.

ನವೆಂಬರ್ 6 ಕ್ಕೆ ಸಿನಿಮಾ ತಮಿಳು, ತೆಲುಗು, ಕನ್ನಡ, ಹಿಂದಿ ಹೀಗೆ ಎಲ್ಲಾ ಭಾಷೆಗಳಲ್ಲೂ ಏಕಕಾಲಕ್ಕೆ ಬೆಗಂಳೂರಿನಲ್ಲಿ ರಿಲೀಸ್ ಆಗುತ್ತಿದೆ. ವಿಶೇಷ ಅಂದ್ರೆ ಈ ಸಿನಿಮಾ 3 ಸಾವಿರ ಥಿಯೇಟರ್ ಗಳಲ್ಲಿ ರಿಲೀಸ್ ಆಗುತ್ತಿದೆ. ಕರ್ನಾಟಕದಲ್ಲೇ 450 ಸಿನಿಮಾ ಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಆ ಮೂಲಕ ಹೊಸ ದಾಖಲೆ ಬರೋದಕ್ಕೆ ಸಿನಿಮಾ ತಂಡ ತಯಾರಾಗಿದೆ.

ಇನ್ನು ಬೆಂಗಳೂರಿನ ಮುಖ್ಯ ಚಿತ್ರಮಂದಿರ ಸಂತೋಷ್ ಹಾಗೂ ಕಪಾಲಿ ಥಿಯೇಟರ್ ನಲ್ಲಿ ಕನ್ನಡ ಭಾಷೆಯಲ್ಲಿ ‘ಕಿಲ್ಲಿಂಗ್ ವೀರಪ್ಪನ್’ ಪ್ರದರ್ಶನಗೊಂಡರೆ, ಭೂಮಿಕ ಮತ್ತು ನಟರಾಜ ಚಿತ್ರಮಂದಿರದಲ್ಲಿ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಪ್ರದರ್ಶನಗೊಳ್ಳಲಿದೆ.

Write A Comment