ಅಂತರಾಷ್ಟ್ರೀಯ

ಡೆಸ್ಕ್​ಟಾಪ್​​ ಹಾಗೂ ಲ್ಯಾಪ್​ ಟಾಪ್​ನಲ್ಲಿ ವಾಟ್ಸ್​ ಅಪ್ ಬಳಸೋದು ಹೇಗೆ..? ಇಲ್ಲಿದೆ ನೋಡಿ ಪರಿಹಾರ

Pinterest LinkedIn Tumblr

watsವಾಟ್ಸ್​ ಆಪ್​ ಎನ್ನುವುದು ಈಗ ಬಹಳಷ್ಟು ಪ್ರಸಿದ್ಧಿ ಪಡೆದಿದೆ. ವಾಟ್ಸ್​ ಆಪ್​ ಇಲ್ಲದೆ ಬದುಕಲೇ ಸಾಧ್ಯವಿಲ್ಲ ಎಂಬಂತಹ ವಾತಾವರಣ ನಮ್ಮ ಯುವ ಜನರ ನಡುವೆ ಇದೆ. ವಿಶ್ವಾದ್ಯಾಂತ ಇರುವ ಸ್ಮಾರ್ಟ್​ಫೋನ್​ ಬಳಕೆದಾರರು ಬಹುತೇಕ ವಾಟ್ಸ್​ಆಪ್​ನ ಮೋಹಕ್ಕೊಳಗಾಗಿದ್ದಾರೆ. ಸಂದೇಶ ರವಾನಿಸಲು ಇರುವ ಅತ್ಯಾಧುನಿಕ ಸೌಲಭ್ಯ ಮತ್ತು ಕಡಿಮೆ ವೆಚ್ಚ ವಾಟ್ಸ್​ಆಪ್​ನ ನಿಜವಾದ ತಾಕತ್ತು. ಇಂತಹ ವಾಟ್ಸ್​ಆಪನ್ನು ಈಗ ಬರೀ ನಿಮ್ಮ ಮೊಬೈಲ್​ನಲ್ಲಿ ಮಾತ್ರ ಬಳಕೆ ಮಾಡಬೇಕೆಂದಿಲ್ಲ. ಡೆಸ್ಕ್​ಟಾಪ್​​, ಲ್ಯಾಪ್​ಟಾಪ್​​ನಲ್ಲೂ ಇದನ್ನು ಬಳಸಬಹುದು ಮತ್ತು ಇದು ಕೂಡಾ ಸುಲಭ ಮಾರ್ಗ ಆಗಿದೆ.

ನೀವೇನು ಮಾಡಬೇಕು?
ವಾಟ್ಸ್​ಆಪ್​ ವೆಬ್​ ಬಳಸುವುದಕ್ಕೆ ನಿಮ್ಮ ಬಳಿ ಕನಿಷ್ಠ ವಾಟ್ಸ್​ ಆಪ್​​ ಇರುವ ಒಂದು ಫೋನ್​​​​ ಬೇಕು ಮತ್ತು ಅದು ಫೋನ್​ನಲ್ಲಿ ಸೈನ್​ ಇನ್​ ಆಗಿರಬೇಕು. ಇದಾದ ಬಳಿಕ ನಿಮ್ಮ ಬಳಿ ಕಂಪ್ಯೂಟರ್​ ಇರಬೇಕು(ಲ್ಯಾಪ್​ಟಾಪ್​ ಕೂಡಾ ಆದೀತು). ಆದರೆ, ಇಲ್ಲಿ ಮಾರ್ಡನ್​ ಬ್ರೌಸರ್​ ಆಪ್ಶನ್ಸ್​ ಬೇಕು. ಅಂದರೆ, ಕ್ರೋಮ್​​, ಫೈರ್​ಫಾಕ್ಸ್​​, ಒಪೆರಾ ಅಥವಾ ಸಫಾರಿ. ವಾಟ್ಸ್​ ಆಪ್​ ವೆಬ್​ ಇಂಟರ್​ನೆಟ್​ ಎಕ್ಸ್​​ಪ್ಲೋರ್​ ಮತ್ತು ಮೈಕ್ರೋಸಾಫ್ಟ್​ ಎಡ್ಜ್​ನಲ್ಲಿ ಓಪನ್​ ಆಗುವುದಿಲ್ಲ. ಇಂಟರ್​ನೆಟ್​ ಕನೆಕ್ಷನ್​ ಇರಬೇಕು. ಕಂಪ್ಯೂಟರ್ ಮತ್ತು ಮೊಬೈಲ್​ ಫೋನ್​ ಎರಡರಲ್ಲೂ ಇಂಟರ್​ನೆಟ್​ ಆನ್ ಆಗಿರಬೇಕು.

ವೆಬ್​​​ ವಾಟ್ಸ್​ ಆಪ್​ ಬಳಸುವುದು ಹೇಗೆ?
ನಿಮ್ಮ ಕಂಪ್ಯೂಟರ್​ ಬ್ರೌಸರ್​ನಲ್ಲಿ http://web.whatsapp.com  ಎಂದು ಟೈಪ್​ ಮಾಡಿ. ಆಗ ವೆಬ್​ ತೆರೆದುಕೊಳ್ಳುತ್ತದೆ. ಹೋಮ್​ ಪೇಜ್​ನಲ್ಲಿ ಈ ರೀತಿಯ ಒಂದು ಚೌಕಾಕಾರದ ಆಕೃತಿ ನಿಮಗೆ ಕಾಣಸಿಗುತ್ತದೆ. ಅದು ಹೇಗಿದೆ ಅಂತ ಇಲ್ಲಿದೆ ನೋಡಿ… ಈಗ ನೀವು ನಿಮ್ಮ ಮೊಬೈಲನ್ನು ಆನ್​ ಮಾಡಿಕೊಳ್ಳಬೇಕು. ನಿಮ್ಮ ಫೋನ್​ನ ವಾಟ್ಸ್​ ಆಪ್​​ನಲ್ಲಿ ವೆನ್​​ ವಾಟ್ಸ್​ಆಪ್​ ಎಂಬ ಆಪ್ಸನ್​​​ ಒಂದು ಇದೆ. ಬೇರೆ ಬೇರೆ ಮೊಬೈಲ್​ಗಳಲ್ಲಿ ಈ ಆಪ್ಶನ್​ ಎಲ್ಲಿದೆ ಎಂಬ ವಿವರ ಇಲ್ಲಿದೆ ನೋಡಿ…

ವಾಟ್ಸ್ ಆಪ್ ನ  ಮೆನು ಬಟನ್​ ಮೇಲೆ ಕ್ಲಿಕ್ಕಿಸಿ  ‘WhatsApp Web’ ಆಯ್ಕೆ ಮಾಡಿ

ಈಗ ನಿಮ್ಮ ಫೋನ್​​​ನಲ್ಲಿ ಒಂದು ಕ್ಯಾಮೆರಾ ವಿಂಡೋ ತೆರೆದುಕೊಳ್ಳುತ್ತದೆ. ಇದಾದ ಬಳಿಕ ನಿಮ್ಮ ಕಂಪ್ಯೂಟರ್​ನಲ್ಲಿ ತೆರೆದುಕೊಂಡ ಚೌಕಾಕಾರದ ಸ್ಕ್ರೀನ್​​ಗೆ ನೇರವಾಗಿ ನಿಮ್ಮ ಫೋನ್​ನಲ್ಲಿ ತೆರೆದುಕೊಂಡ ಕ್ಯಾಮೆರಾ ವಿಂಡೋವನ್ನು ಹಿಡಿಯಿರಿ. ಈ ಸಂದರ್ಭದಲ್ಲಿ ಕಂಪ್ಯೂಟರ್​ನಲ್ಲಿ ಕಾಣಿಸಿಕೊಂಡ QR ಕೋಡ್​ ಸ್ಕ್ಯಾನ್​ ಆಗುತ್ತದೆ. ಕಣ್ಣು ಮುಚ್ಚಿ ತೆರೆಯುವುದರೊಳಗೆ ನಿಮ್ಮ ವಾಟ್ಸ್​ ಆಪ್​ ಕಂಪ್ಯೂಟರ್​ನಲ್ಲೂ ತೆರೆದುಕೊಂಡಿರುತ್ತದೆ. ನಿಮ್ಮ ಫೋನ್​ನಲ್ಲಿರುವ ಅಷ್ಟೂ ಕಾಂಟಾಕ್ಸ್ಟ್​​​ಗಳು ಕಂಪ್ಯೂಟರ್​ಗೆ ಬಂದಿರುತ್ತದೆ. ಅಲ್ಲಿ ನೀವು ಫೋನ್​ನಂತೆಯೇ ವಾಟ್ಸ್​ ಆಪನ್ನು ಬಳಸಿಕೊಳ್ಳಬಹುದು.

ಒಂದೊಮ್ಮೆ ನೀವು “keep me signed in”ಬಟನ್​ ಪ್ರೆಸ್​ ಮಾಡಿದರೆ ನಿಮ್ಮ ಮೊಬೈಲ್​ ಫೋನ್​ ಆನ್​ ಇರುವ ವರೆಗೂ ಇದು ಆನ್​ ಆಗಿರುತ್ತದೆ. ಹೆಚ್ಚು ಸಿಸ್ಟಮ್​ನಲ್ಲೇ ವಾಟ್ಸ್​ಆಪ್​ ಬಳಸುವವರಿಗೆ ಇದು ಒಳ್ಳೆಯ ದಾರಿ. ಇನ್ನು, ಲಾಗ್​ ಔಟ್​ ಅಂತ ಕೊಟ್ಟರೆ ಮತ್ತೆ ನೀವು ಆರಂಭದಿಂದಲೇ ವೆಬ್​ಸೈಟ್​ ಓಪನ್​ ಮಾಡಿಕೊಂಡು ವಾಟ್ಸ್​ ಆಪ್​ ಬಳಸಬಹುದು. ಮೇಲೆ ಹೇಳಿದ ವಿಧಾನವನ್ನೇ ಅನುಸರಿಸಿದರೆ ಆಯ್ತು. ಇದಕ್ಕೇನು ಹೆಚ್ಚು ಸಮಯ ಹಿಡಿಯುವುದಿಲ್ಲ.

Write A Comment