ಮನೋರಂಜನೆ

ಯಶ್ ಸಿನಿಮಾದಲ್ಲಿ ವಿಲನ್ ಪಾತ್ರ ನಿರ್ವಹಿಸುತ್ತಿದ್ದಾರೆ ಆದಿತ್ಯ

Pinterest LinkedIn Tumblr

yashಸ್ಯಾಂಡಲ್ ವುಡ್ ಅಂಗಳಕ್ಕೆ ಹೆತ್ತವರ ಹೆಸರಲ್ಲಿ ಅದೆಷ್ಟೋ ನಟ ನಟಿಯರು ಬಂದಿದ್ದಾರೆ. ಆದ್ರೆ ಅದರಲ್ಲಿ ಕ್ಲಿಕ್ ಆದವರು ಕೆಲವರು ಮಾತ್ರ. ಹೀಗೆ ಬಂದವರಲ್ಲಿ ಆದಿತ್ಯ ಕೂಡ ಒಬ್ಬರು. ತಂದೆ ರಾಜೇಂದ್ರ ಸಿಂಗ್ ಬಾಬು ಮೂಲಕ ಸಿನಿಮಾ ರಂಗಕ್ಕೆ ಬಂದ್ರೂ ಸಿನಿಮಾ ರಂಗ ಆದಿತ್ಯ ಅವರಿಗೆ ನಿರೀಕ್ಷಿಸಿದ ಮಟ್ಟದ ಯಶಸ್ಸು ತಂದುಕೊಂಡಲಿಲ್ಲ.

ಡೆಡ್ಲಿ ಸೋಮ ಸಿನಿಮಾ ಬಿಟ್ಟರೆ ಇನ್ನ್ಯಾವ ಸಿನಿಮಾ ಕೂಡ ಅವರಿಗೆ ಯಶಸ್ಸು ತಂದು ಕೊಡಲಿಲ್ಲ. ಈ ನಡುವೆ ಆದಿತ್ಯ ತಮಿಳು ಸಿನಿಮಾವೊಂರಲ್ಲಿ ವಿಲನ್  ಪಾತ್ರ ಮಾಡಿ ಮಾಡಿದ್ದಾರೆ. ಹೀಗಿರುವಾಗಲೇ ಆದಿತ್ಯ ಕನ್ನಡ ಸಿನಿಮಾವೊಂದರಲ್ಲಿ ಖಳನಾಯಕನಾಗುತ್ತಿದ್ದಾರೆ. ಯಶ್ ಅಭಿನಯಿಸುತ್ತಿರುವ ಮಾಸ್ಟರ್ ಪೀಸ್ ಸಿನಿಮಾದಲ್ಲಿ ಆದಿತ್ಯ ಖಳನಾಯಕನ ಪಾತ್ರ ನಿರ್ವಹಿಸುತ್ತಿದ್ದಾರೆ.

ಇನ್ನು ಮಾಸ್ಟರ್ ಪೀಸ್   ಸಿನಿಮಾದಲ್ಲಿ  ಯಶ್-ಆದಿತ್ಯ ಜುಗಲ್ಬಂದಿ ಇರುತ್ತೆ ಅಂತಾ ಗೊತ್ತಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈ ಸಿನಿಮಾವನ್ನು ಮಂಜು ಮಾಂಡವ್ಯ ನಿರ್ದೇಶನ ಮಾಡುತ್ತಿದ್ದಾರೆ. ಯಶ್ ಗೆ ಜೋಡಿಯಾಗಿ ಶಾನ್ವಿ ಶ್ರೀವತ್ಸ ಜೋಡಿಯಾಗಿ ನಟಿಸುತ್ತಿದ್ದಾರೆ.

Write A Comment