ಮದುವೆ ಬಳಿಕ ಎಲ್ಲರ ಬದುಕು ಬದಲಾಗುತ್ತದೆ. ಜನಸಾಮಾನ್ಯರ ಮಟ್ಟಿಗೆ ಈ ಬದಲಾವಣೆ ಅವರ ಪರಿಚಿತ ವಲಯದಲ್ಲಷ್ಟೇ ಸೀಮಿತ. ಸ್ಟಾರ್ಗಳ ವಿಚಾರದಲ್ಲಿ ಹಾಗಲ್ಲ, ಅಲ್ಲೂ ಪ್ರಚಾರ! ಶಾಹಿದ್ ಕಪೂರ್ ಜೋಡಿ ಇಲ್ಲೂ ಮಾಧ್ಯಮ ಪ್ರಚಾರದ ಗಿಫ್ಟ್ ಪಡೆಯುತ್ತಿದೆ.
ಕಳೆದ ಜುಲೈನಲ್ಲಿ ದೆಹಲಿಯ ಮೀರಾ ರಜಪೂತ್ ಅವರ ಕೈಹಿಡಿದಿದ್ದ ಶಾಹಿದ್ಗೆ ಯಾವಾಗಲೂ ನಾರ್ಮಲ್ ಮನುಷ್ಯನಾಗಿರಲು ಇಷ್ಟ. ‘ಮುಖಕ್ಕೆ ಹಚ್ಚಿದ ಬಣ್ಣ ತೊಳೆದುಕೊಂಡು ಮನೆಗೆ ಬಂದ ಬಳಿಕ ನನ್ನನ್ನು ಒಬ್ಬ ಸಾಧಾರಣ ಮನುಷ್ಯನಂತೆ ಕಾಣುವವರಿರಬೇಕು’ ಎಂಬುದು ಅವರ ಬಯಕೆಯಾಗಿತ್ತು. ಕರೀನಾ ಕಪೂರ್, ವಿದ್ಯಾ ಬಾಲನ್, ಪ್ರಿಯಾಂಕಾ ಚೋಪ್ರಾ ಜತೆಗಿನ ಗಾಸಿಪ್ ಸಂಬಂಧದ ಆಚೆ ಹೋಗಿ ಶಾಹಿದ್, ನಾರ್ಮಲ್ ಹುಡುಗಿ ಮೀರಾ ಕೈಹಿಡಿದದ್ದು ಇದೇ ಕಾರಣಕ್ಕೆ. ‘ಮನೆಗೆ ಬಂದಾಗ ವೃತ್ತಿ ಕುರಿತ ಮಾತುಗಳಿರಬಾರದು. ಖಾಸಗಿ ಅಗತ್ಯಗಳಷ್ಟೇ ಅಲ್ಲಿ ಮುಖ್ಯ’ ಅನ್ನುವ ಶಾಹಿದ್ಗೆ ಮೀರಾ ಯಾವಾಗಲೂ ನಾರ್ಮಲ್ ಮನುಷ್ಯನಾಗಿರುವಂತೆ ನೋಡಿಕೊಳ್ಳುತ್ತಾರಂತೆ.
ಪತಿಯೊಂದಿಗಿನ ಬಂಧವನ್ನು ಮತ್ತಷ್ಟು ಬಿಗಿಗೊಳಿಸುವುದು ಮೀರಾ ಇಂಗಿತ. ಈ ಕಾರಣಕ್ಕಾಗಿ ಅವರು ಇನ್ನೊಮ್ಮೆ ಮಧುಚಂದ್ರಕ್ಕೆ ಹೋಗಿಬರುವ ಬಯಕೆ ವ್ಯಕ್ತಪಡಿಸಿದ್ದಾರೆ. ಶಾಹಿದ್ ಕೂಡ ಅದಕ್ಕೆ ಸೈ ಎಂದಿದ್ದಾರೆ ಅನ್ನುತ್ತವೆ ಮೂಲಗಳು. ಮದುವೆಯಾದ ಹೊಸದರಲ್ಲಿ ಕೇವಲ ಒಂದು ವಾರ ಕಾಲ ಲಂಡನ್ಗೆ ಹನಿಮೂನ್ಗಾಗಿ ಹೋಗಿಬಂದಿತ್ತು ಈ ಜೋಡಿ. 2ನೇ ಕಂತಿನ
ಹನಿಮೂನ್ನಲ್ಲಿ ಫ್ರಾನ್ಸ್ ಬಳಿ ಪೆಸಿಫಿಕ್ ಸಮುದ್ರದಲ್ಲಿರುವ ಬೊರಾ ಬೊರಾ ದ್ವೀಪಕ್ಕೆ ಹಾಗೂ ಮಾಲ್ಡೀವ್ಸ್ಗೆ ಪಯಣಿಸುವ ಯೋಜನೆ ಹಾಕಿಕೊಂಡಿದ್ದಾರಂತೆ. ಹ್ಞಾಂ… ಈ ಬಾರಿ ಒಂದು ವಾರವಲ್ಲ, ಅದಕ್ಕಿಂತ ಜಾಸ್ತಿ!!